ಬಾಬಾ ಸಾಹೇಬರ ಜಯಂತಿ ಆಚರಣೆ

ಸರಗೂರು ತಾಲೂಕಿನ ಪಟ್ಟಣದ ನಾಲ್ಕನೇ ವಾರ್ಡಿನ ಬಲಗೈ ಸಮಾಜದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.
ಸರಗೂರು ತಾಲೂಕಿನ ಪಟ್ಟಣದ ನಾಲ್ಕನೇ ವಾರ್ಡಿನ ಬಲಗೈ ಸಮಾಜದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.
Published on
ಸರಗೂರು: ಪಟ್ಟಣದ ನಾಲ್ಕನೇ ವಾರ್ಡಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳ್ಳಿ ರಥ ಹಾಗೂ ಆಟೋಗಳಿಗೆ ಅಂಬೇಡ್ಕರ್ ಅವರ ಭಾವಚಿತ್ರ ಕಟ್ಟಿಕೊಂಡು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಾವೀರ ಸರ್ಕಲ್, ಬಸ್ ನಿಲ್ದಾಣ ಹಾಗೂ ಪಪಂ ಮುಂಭಾಗ ಮೆರವಣಿಗೆ ಸಾಗಿತು. ಮಂಗಳವಾದ್ಯ, ತಮಟೆ ನಗಾರಿ, ಡಿಜೆ ಸೌಂಡ್ಸ್ ಮತ್ತು ಕಂಸಾಳೆ ನೃತ್ಯ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತು.
ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ, ಪಪಂ ಸದಸ್ಯೆ ಚಂದ್ರಕಲಾ ರಾಜಣ್ಣ, ಪಪಂ ಮಾಜಿ ಸದಸ್ಯ ಬಿಲ್ಲಯ್ಯ, ಯಜಮಾನರಾದ ಭೋಗಯ್ಯ, ಮಹದೇವಯ್ಯ, ಅಂಬೇಡ್ಕರ್ ಭವನ ಟ್ರಸ್ಟ್ ಕಾರ್ಯದರ್ಶಿ ಎಸ್.ಡಿ.ಕಾರಯ್ಯ, ಗೋಪಾಲ್, ಸ್ವಾಮಿ, ಮುಖಂಡರಾದ ಬಣ್ಣಯ್ಯ, ಇಂದಿಯಪ್ಪ, ದೊಡ್ಡಭೈರ, ಭೀಮ, ಪರಶಿವ, ನಂಜುಂಡಯ್ಯ, ಬೆಟ್ಟಯ್ಯ, ಮಧುಕುಮಾರ್, ಸಿದ್ದರಾಜು, ಸರಗೂರು ಕೃಷ್ಣ, ರಾಜಣ್ಣ, ಮಹದೇವಸ್ವಾಮಿ, ವಿಜಯ್, ಅಭಿ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net