ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಮಾತನಾಡಿ, ತಂತಿ ಹಳೆಯದಾಗಿರುವ ಕಾರಣ ಇದೇ ಜಾಗದಲ್ಲಿ ಆಗಾಗ್ಗೆ ತಂತಿ ತುಂಡಾಗಿ ಬೀಳುತ್ತಲೇ ಇದೆ. ಸೆಸ್ಕ್ ಸಿಬ್ಬಂದಿಯೊಬ್ಬರು ಶನಿವಾರ ಬಂದು ಹಳೆಯ ತಂತಿಯನ್ನೇ ಸರಿಪಡಿಸುವುದಾಗಿ ಹೇಳಿದರು. ಇದು ಸಾರ್ವಜನಿಕರು ಓಡಾಡುವ ರಸ್ತೆ ಪಕ್ಕದಲ್ಲಿ ಇದ್ದು ಮತ್ತೆ ತಂತಿ ತುಂಡಾಗಿ ಬಿದ್ದು ಏನಾದರೂ ಅನಾಹುತವಾದರೆ ಯಾರು ಹೊಣೆ, ಹೊಸ ತಂತಿ ಅಳವಡಿಸಿ ಎಂದು ಕೇಳಿದ್ದಕ್ಕೆ ಈ ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿ ಎಂದು ಹೇಳಿ ಹಳೆಯ ತಂತಿಯನ್ನೂ ದುರಸ್ತಿ ಮಾಡದೆ ತೆರಳಿದರು ಎಂದು ಆರೋಪಿಸಿದರು.