ಮೇಟಿಕುಪ್ಪೆ ಹಾಡಿಯ ಕಾವ್ಯಾ, ನಂದೀಶ್, ರಾಜಕುಮಾರ, ಅರ್ಚನಾ, ಚಂದ್ರ, ಪ್ರಸಾದ್, ಬಸವಣ್ಣ, ಮೀನಾ, ದೇವಕಿ, ಕಾಳ, ಪ್ರವೀಣ್, ಸಂಧ್ಯಾ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ಯಾಸೆಂಜರ್ ಆಟೋದಲ್ಲಿ ಮೇಟಿಕುಪ್ಪೆ ಹಾಡಿಯಿಂದ ಕೊಡಗಿನ ಕುಟ್ಟ ಗ್ರಾಮದ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದಾಗ ಅಗಸನಹುಂಡಿ ಗ್ರಾಮದ ಬಳಿ ಸ್ಟೀರಿಂಗ್ ತುಂಡಾಗಿದೆ. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಆಟೋದಲ್ಲಿ ಇದ್ದ 13 ಮಂದಿಗೂ ಪೆಟ್ಟಾಗಿದ್ದು, ಈ ಪೈಕಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.