ಹಂಚೀಪುರ ಬಳಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ

ಸರಗೂರು ಪಟ್ಟಣದಲ್ಲಿ ನಗರೋತ್ಥಾನ, ಎಸ್‌ಟಿಪಿ ಯೋಜನೆಯಡಿ 2 ಕೋಟಿ ರೂ.ವೆಚ್ಚದಲ್ಲಿ ಚರಂಡಿ, ಸಿಸಿ ರಸ್ತೆ, ಡಾಂಬರೀಕರಣ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಭೂಮಿಪೂಜೆ ನೆರವೇರಿಸಿದರು. ಪಿ.ರವಿ, ಶ್ರೀನಿವಾಸ್, ಚೈತ್ರಾಸ್ವಾಮಿ, ಶ್ರೀನಿವಾಸ್, ಚಲುವಕೃಷ್ಣ, ಸಣ್ಣತಾಯಮ್ಮ, ಹೇಮಾವತಿ ರಮೇಶ್, ಭಾಗ್ಯಲಕ್ಷ್ಮೀ ನಿಂಗರಾಜು, ಕಂದೇಗಾಲ ಶಿವರಾಜು ಇದ್ದರು.
ಸರಗೂರು ಪಟ್ಟಣದಲ್ಲಿ ನಗರೋತ್ಥಾನ, ಎಸ್‌ಟಿಪಿ ಯೋಜನೆಯಡಿ 2 ಕೋಟಿ ರೂ.ವೆಚ್ಚದಲ್ಲಿ ಚರಂಡಿ, ಸಿಸಿ ರಸ್ತೆ, ಡಾಂಬರೀಕರಣ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಭೂಮಿಪೂಜೆ ನೆರವೇರಿಸಿದರು. ಪಿ.ರವಿ, ಶ್ರೀನಿವಾಸ್, ಚೈತ್ರಾಸ್ವಾಮಿ, ಶ್ರೀನಿವಾಸ್, ಚಲುವಕೃಷ್ಣ, ಸಣ್ಣತಾಯಮ್ಮ, ಹೇಮಾವತಿ ರಮೇಶ್, ಭಾಗ್ಯಲಕ್ಷ್ಮೀ ನಿಂಗರಾಜು, ಕಂದೇಗಾಲ ಶಿವರಾಜು ಇದ್ದರು.
Published on
ಸರಗೂರು: ಕೋಟೆ, ಸರಗೂರು ತಾಲೂಕು ಎರಡು ಕಣ್ಣುಗಳು ಇದ್ದಂತೆ. ಎರಡೂ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದಲ್ಲಿ 9ನೇ ವಾರ್ಡ್ ಸೇರಿದಂತೆ ನಾನಾ ವಾರ್ಡ್‌ಗಳಲ್ಲಿ ನಗರೋತ್ಥಾನ, ಎಸ್‌ಟಿಪಿ ಯೋಜನೆಯಡಿ 2 ಕೋಟಿ ರೂ.ವೆಚ್ಚದಲ್ಲಿ ಚರಂಡಿ, ಸಿಸಿ ರಸ್ತೆ, ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಶಾಸಕರಾಗಿದ್ದವರು ಕೋಟೆ ಅಭಿವೃದ್ಧಿಗೆ ಮಾತ್ರ ಹೆಚ್ಚು ಒತ್ತು ನೀಡುತ್ತಿದ್ದು, ಸರಗೂರು ತಾಲೂಕನ್ನು ಕಡೆಗಣಿಸುತ್ತಿದ್ದರು ಎಂಬ ಅಪವಾದವಿತ್ತು. ಅದನ್ನು ಬದಿಗೆ ಸರಿಸಿ ನೂತನ ತಾಲೂಕು ಸರಗೂರಿನ ಅಭಿವೃದ್ಧಿಗೂ ಹೆಚ್ಚು ನೀಡುತ್ತಿದ್ದೇನೆ. ತಾಲೂಕು ಕೇಂದ್ರವಾದ ಬಳಿಕ ಮೊದಲ ಬಾರಿಗೆ ಸರಗೂರಿಗೆ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಲಾಯಿತು. ನಂತರ ಹಂತ-ಹಂತವಾಗಿ ತಾಲೂಕು ಪಂಚಾಯಿತಿ ಬಂತು. ಪೊಲೀಸ್ ಇಲಾಖೆ, ಪಶು ಇಲಾಖೆ, ತಹಸೀಲ್ದಾರ್ ಕಚೇರಿಗಳು ಆರಂಭವಾಗಿವೆ ಎಂದು ಹೇಳಿದರು.
ಸದ್ಯ ಒಂದೇ ಸೂರಿನಡಿ ನಾನಾ ಇಲಾಖೆಗಳು ಕೆಲಸ ನಿರ್ವಹಿಸುವಂತೆ ಆಡಳಿತಸೌಧದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಶೀಘ್ರದಲ್ಲೇ ಕಾಮಗಾರಿ ಮುಗಿದ ಬಳಿಕ ಎಲ್ಲ ಇಲಾಖೆಗಳು ಬರಲಿವೆ. ಹಂಚೀಪುರದ ಬಳಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣವಾಗಲಿದೆ. ಅದರ ಪಕ್ಕದಲ್ಲೇ ಅಗ್ನಿಶಾಮಕ ಠಾಣೆಯೂ ಇರಲಿದೆ. ಕ್ರೀಡಾಂಗಣಕ್ಕೆ (ಬಾಲ್‌ಫೀಲ್ಡ್) 5 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಪಡಿಸಲಾಗುವುದು. ವೇದಿಕೆ, ಮಕ್ಕಳು ಆಟವಾಡಲು ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನವರು ಸಂತೆ ಮಾಸ್ತಮ್ಮನ ಕೆರೆ ಉದ್ಯಾನ ನಿರ್ಮಿಸಿ ಸುತ್ತಲೂ ವಾಕ್‌ಪಾತ್ ಮಾಡುವುದಾಗಿ ಹೇಳಿದ್ದರು. ಕೆಲ ಕಾರಣದಿಂದಾಗಿ ನಿಂತು ಹೋಯಿತು. ಮುಂದಿನ ದಿನಗಳಲ್ಲಿ ಸಂತೆ ಮಾಸ್ತಮ್ಮನ ಕೆರೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಈಗಾಗಲೇ 12 ವಾರ್ಡ್‌ಗಳನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಅನಿಲ್ ಚಿಕ್ಕಮಾದು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ವಿರೋಧಿಗಳು ಟೀಕೆ ಮಾಡುವುದು ಸಹಜ. ಕೆಲಸವಾಗದವರು ಮಾತನಾಡುತ್ತಿದ್ದಾರೆ. ಆದರೆ, ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವುದಿಲ್ಲ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮಾತನಾಡಿದರು. ಅಧ್ಯಕ್ಷೆ ಚೈತ್ರಾಸ್ವಾಮಿ, ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಸಣ್ಣತಾಯಮ್ಮ, ಹೇಮಾವತಿ ರಮೇಶ್, ಜಿಪಂ ಮಾಜಿ ಸದಸ್ಯರಾದ ಭಾಗ್ಯಲಕ್ಷ್ಮೀ ನಿಂಗರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಟೌನ್ ಅಧ್ಯಕ್ಷ ಎಸ್.ಎನ್.ನಾಗರಾಜು, ಚೆನ್ನಿಪುರ ಚಲುವರಾಜು, ರಮೇಶ್, ಶೇಷ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಸುಪ್ರೀತ್, ಮಂಜುನಾಥ್, ಸುದರ್ಶನ್, ಮುಖ್ಯಾಧಿಕಾರಿ ಸಂತೋಷ್ ಕುಮಾರ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net