ಶಾಸಕ ರೇಣುಕಾಚಾರ್ಯರ ಸಮಯಪ್ರಜ್ಞೆಯಿಂದ ತಪ್ಪಿದ ಆಕ್ಸಿಜನ್‌ ಕೊರತೆ ದುರಂತ; ಉಳಿಯಿತು 40 ಸೋಂಕಿತರ ಪ್ರಾಣ

renukacharya
Published on

ದಾವಣಗೆರೆ: ರಾಜ್ಯದ ಹಲವು ಕಡೆಗಳಲ್ಲಿ ಆಕ್ಸಿಜನ್​ ಕೊರತೆ ಉಂಟಾಗುತ್ತಿರುವ ಈ ಸಮಯದಲ್ಲಿ ಶಾಸಕರ ಸಮಯಪ್ರಜ್ಞೆಯಿಂದಾಗಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಆಗಬಹುದಾದ ದುರಂತ ತಪ್ಪಿದೆ. ಸೋಂಕಿತರು ಹಾಗೂ ಅವರ ಸಂಬಂಧಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ 40 ಕೋವಿಡ್ ಸೊಂಕಿತರಿಗೆ ಆಕ್ಸಿಜನ್​ ನೀಡಿ ಚಿಕಿತ್ಸೆ ಕೊಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಮಂಗಳವಾರ ದಿಢೀರ್ ಆಕ್ಸಿಜನ್ ಕೊರತೆ ಉಂಟಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಶಾಸಕ ಎಂ.ಪಿ.‌ ರೇಣುಕಾಚಾರ್ಯ ತುರ್ತಾಗಿ ಹರಿಹರದ ಸದರನ್ ಗ್ಯಾಸ್ ಏಜೆನ್ಸಿಯಿಂದ ತುರ್ತಾಗಿ ಸಿಲಿಂಡರ್ ವ್ಯವಸ್ಥೆ ಮಾಡಿಸಿದ್ದಾರೆ.

ಪೊಲೀಸ್ ಬೆಂಗಾವಲು ವಾಹನದೊಂದಿಗೆ 10 ಆಕ್ಸಿಜನ್ ಗ್ಯಾಸ್ ಸಿಲಿಂಡರ್​ಗಳನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ನಂತರ, ಸಮಯಕ್ಕೆ ಸರಿಯಾಗಿ ತಾವೇ ಖುದ್ದಾಗಿ ಹರಿಹರಕ್ಕೆ ತೆರಳಿ 21 ಆಕ್ಸಿಜನ್ ಗ್ಯಾಸ್ ಸಿಲಿಂಡರ್‌ಗಳನ್ನು ತರುವ ಮೂಲಕ ಆಗಬಹುದಾಗಿದ್ದ ಅವಗಡ ತಪ್ಪಿಸಿದ್ದಾರೆ. ಆಕ್ಸಿಜನ್ ಸರಬರಾಜಿನಲ್ಲಿ ಅರ್ಧ ಗಂಟೆ ತಡವಾಗಿದ್ದರು 40 ಜನರ ಪ್ರಾಣ ಹಾನಿಯಾಗುವ ಸಾಧ್ಯತೆಯಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net