50ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ; ದೇವರ ಪ್ರಸಾದಕ್ಕೆಂದು ಮಾಡಿದ್ದ ಕೇಸರಿಬಾತ್-ಚಿತ್ರಾನ್ನ ತಿಂದವರು ಆಸ್ಪತ್ರೆಗೆ ದಾಖಲು!

Devotees
Published on

ಕೋಲಾರ: ದೇವರ ಪ್ರಸಾದಕ್ಕೆಂದು ಮಾಡಿದ್ದ ಕೇಸರಿಬಾತ್​-ಚಿತ್ರಾನ್ನ ತಿಂದ 50ಕ್ಕೂ ಅಧಿಕ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಕೋಲಾರದ ಶ್ರೀನಿವಾಸಪುರ ತಾಲೂಕಿನ ಬೀರಗಾನಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ.

ಹೊಸ ವರ್ಷಾಚರಣೆ ಸಲುವಾಗಿ ಇಲ್ಲಿನ ಗಂಗಮ್ಮ ದೇವಾಲಯದಲ್ಲಿ ಪ್ರಸಾದಕ್ಕೆಂದು ಕೇಸರಿಬಾತ್-ಚಿತ್ರಾನ್ನ ಮಾಡಿಸಲಾಗಿತ್ತು. ಬಳಿಕ ಅದನ್ನು ಭಕ್ತರಿಗೆ ವಿತರಣೆ ಮಾಡಲಾಗಿತ್ತು. ಅದನ್ನು ಸೇವಿಸಿದ 50ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ.

ದೇವಾಲಯದ ಆಡಳಿತ ಮಂಡಳಿ ಈ ಕೇಸರಿಬಾತ್​-ಚಿತ್ರಾನ್ನ ಮಾಡಿಸಿತ್ತು. ಅಸ್ವಸ್ಥಗೊಂಡ ಜನರನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡಿದ್ದಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net