ವಸತಿ ಶಾಲೆಯೊಂದರಲ್ಲೇ ನೂರಕ್ಕೂ ಅಧಿಕ ಮಕ್ಕಳಿಗೆ ಕೋವಿಡ್​ ಸೋಂಕು; ಹೆಚ್ಚುತ್ತಿದೆ ಕರೊನಾತಂಕ...

corona
Published on

ಬೆಂಗಳೂರು: ರೂಪಾಂತರಿ ಕರೊನಾ ಒಮಿಕ್ರಾನ್​ ಹಾಗೂ ಸಂಭಾವ್ಯ ಮೂರನೇ ಅಲೆಯ ಭೀತಿಯ ಜೊತೆಗೆ ಇದೀಗ ಕರೊನಾ ಮಕ್ಕಳನ್ನು ಕಾಡುವ ಆತಂಕ ಕೂಡ ಹೆಚ್ಚಾಗಿದೆ. ಇತ್ತೀಚೆಗೆ ಹತ್ತು ದಿನಗಳ ಅವಧಿಯಲ್ಲಿ 576 ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.

ಇದರ ಬೆನ್ನಿಗೇ ರಾಜ್ಯದ ವಸತಿ ಶಾಲೆಯೊಂದರಲ್ಲೇ ನೂರಕ್ಕೂ ಅಧಿಕ ಮಕ್ಕಳಲ್ಲಿ ಕೋವಿಡ್​ ಸೋಂಕಿರುವುದು ದೃಢಪಟ್ಟಿದೆ. ಅದರಲ್ಲೂ ಇದು ವಸತಿ ಶಾಲೆಯಾಗಿರುವುದರಿಂದ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.

ಚಿಕ್ಕಮಗಳೂರಿನ ಈ ವಸತಿ ಶಾಲೆಯಲ್ಲಿ 107 ಮಕ್ಕಳು ಕೋವಿಡ್ ಸೋಂಕಿತರಾಗಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಶಾಲೆಯನ್ನು ಸೀಲ್​ಡೌನ್ ಮಾಡಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಮಕ್ಕಳು ಸೋಂಕಿತರಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭೌತಿಕ ತರಗತಿಯನ್ನು ನಡೆಸಬೇಕೇ ಬೇಡವೇ ಎಂಬ ಚರ್ಚೆ ಚುರುಕುಗೊಂಡಿದ್ದು, ನಿರ್ಧಾರ ತೆಗೆದುಕೊಳ್ಳುವುದು ಇಲಾಖೆ ಹಾಗೂ ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net