ದೇವಸ್ಥಾನಗಳ ಬಾಗಿಲು ಮುರಿದು ಒಳಹೊಕ್ಕು ವಿಗ್ರಹಗಳ ಧ್ವಂಸ; ಆರೋಪಿಗಳ ಬಂಧನಕ್ಕೆ ಗ್ರಾಮಸ್ಥರ ಆಗ್ರಹ

Feature
Published on

ಮೈಸೂರು: ದೇವಸ್ಥಾನಗಳನ್ನು ಹಾನಿಗೆಡವಿ ವಿಗ್ರಹಗಳನ್ನು ಧ್ವಂಸ ಮಾಡುವಂಥ ಇತಿಹಾಸ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಮರುಕಳಿಸಿದ್ದು, ಕಿಡಿಗೇಡಿಗಳ ಈ ದುಷ್ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್​.ನಗರ ತಾಲೂಕಿನ ಮಠದ ಕಾವಲ್ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಎರಡು ದೇವಸ್ಥಾನಗಳಲ್ಲಿ ಈ ದುಷ್ಕೃತ್ಯ ಕಂಡು ಬಂದಿದೆ. ಇಲ್ಲಿನ ಸಿದ್ದಲಿಂಗೇಶ್ವರ ಹಾಗೂ ಮಹದೇಶ್ವರ ದೇವಸ್ಥಾನಗಳಿಗೆ ಹಾನಿ ಮಾಡಲಾಗಿದೆ.

ಈ ಎರಡೂ ದೇವಸ್ಥಾನಗಳ ಬಾಗಿಲು ಮುರಿದು ಒಳ ನುಗ್ಗಿರುವ ಕಿಡಿಗೇಡಿಗಳು ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಿಂಗಕ್ಕೆ ಹಾನಿ ಮಾಡಿದ್ದಾರೆ. ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಗ್ರಾಮಸ್ಥರು ಆರೋಪಿಗಳನ್ನು ಶೀಘ್ರ ಬಂಧಿಸಿ, ಕಟ್ಟುನಿಟ್ಟಿನ ಕಾನೂನುಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net