

ಬೆಂಗಳೂರು: ಎಂಥೆಂಥ ಕಳ್ಳರಿರುತ್ತಾರೆ, ಹೇಗ್ಹೇಗೆ ಕಳವು ಮಾಡುತ್ತಾರೆ ಎಂಬುದಕ್ಕೆ ಇದೂ ಒಂದು ಉದಾಹರಣೆ. ಮಾತ್ರವಲ್ಲ, ಇನ್ನುಳಿದವರಿಗೆ ಒಂದು ಎಚ್ಚರಿಕೆ ಗಂಟೆ. ನಮ್ಮದೇ ಜಾಗ, ಯಾರು ಮುಟ್ಟುತ್ತಾರೆ ಎಂದುಕೊಂಡು ಎಲ್ಲೆಂದರಲ್ಲಿ ಏನನ್ನಾದರೂ ಇಟ್ಟರೆ ಏನಾಗುತ್ತದೆ ಎಂಬುದಕ್ಕಿದು ಪಾಠ ಕೂಡ.
ಬೆಂಗಳೂರಿನ ಯಶವಂತಪುರದ 'ಕಾಫಿ ಸಂತೆ' ಎಂಬ ಹೋಟೆಲ್ಗೆ ಗ್ರಾಹಕನಂತೆ ಬಂದವ, ಅಮಾಯಕನಂತೆ ಕೆಲವು ಕ್ಷಣ ನಿಂತು ನೋಡನೋಡುತ್ತಿದ್ದಂತೆ ಹೋಟೆಲ್ ಸಿಬ್ಬಂದಿಯದ್ದೇ ಮೊಬೈಲ್ಫೋನ್ ಎಗರಿಸಿಕೊಂಡು ಪರಾರಿಯಾಗಿದ್ದಾನೆ.
ಹೋಟೆಲ್ನಲ್ಲಿ ಕಾಫಿ-ಟೀ ಹಾಕಿ ಕೊಡುವವ ಕಾಫಿ ಫಿಲ್ಟರ್ ಮೇಲಿಟ್ಟಿದ್ದ ಮೊಬೈಲ್ಫೋನನ್ನು ಆತ ತಿರುಗಿ ಆ ಕಡೆ ಹೋಗಿ ಮರಳುವಷ್ಟರಲ್ಲಿ ಈ ಕಳ್ಳ ಕದ್ದುಕೊಂಡು ಏನೂ ಆಗಿಲ್ಲ ಎಂಬಂತೆ ಆರಾಮವಾಗಿ ನಡೆದುಕೊಂಡು ಹೋಗಿದ್ದಾನೆ. ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.