ಸೊಂಟಕ್​ ವೇಲು ಸುತ್ತಿಕೊಂಡು, ಬೆಟ್ಟದ್ ಮೇಲಿಂದ ಹಾರಿ 'ತನ್ನ ಪ್ರೀತಿಯ ಹುಡುಗಿ' ಜತೆ ಆತ್ಮಹತ್ಯೆ; ಸಾವಲ್ಲೂ ಜೊತೆಯಾದ ಪ್ರೇಮಿಗಳು!

Untitled-1
Published on

ರಾಮನಗರ: 'ಕಾರ್ ಕಾರ್​ ಕಾರ್​.. ಎಲ್​ ನೋಡಿ ಕಾರ್​.. ಸೊಂಟಕ್ ಬೆಲ್ಟು ಕಟ್ಟಿಕೊಂಡು, ಫ್ರೀವೇನಲ್ಲಿ ಹಾರಿಕೊಂಡು, ಎಕ್ಸಿಟ್​ನಲ್ಲಿ ಜಾರಿಕೊಳ್ತಾರೋ..'
ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ 'ನನ್ನ ಪ್ರೀತಿಯ ಹುಡುಗಿ' ಚಿತ್ರದಲ್ಲಿ ಬರುವ ಈ ಹಾಡನ್ನು ನೆನಪಿಸುವಂತಿದೆ ಈ ದುರಂತ ಘಟನೆ.

ಇಲ್ಲೊಬ್ಬ ಕಾರ್ ಡ್ರೈವರ್​ ಸೊಂಟಕ್​ ವೇಲು ಸುತ್ತಿಕೊಂಡು, ಬೆಟ್ಟದ್​ ಮೇಲಿಂದ ಹಾರಿಕೊಂಡು ತನ್ನ ಪ್ರೀತಿಯ ಹುಡುಗಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮಿಳುನಾಡು ಮೂಲದ ಸತೀಶ್​ (21) ಹಾಗೂ ಕನಕಪುರದ ಚಂದನಾ (21) ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಮೂರು ವರ್ಷದಿಂದ ಪ್ರೀತಿಸುತ್ತಿದ್ದ ಈ ಪ್ರೇಮಿಗಳು ಸೊಂಟಕ್ಕೆ ದುಪ್ಪಟ್ಟ ಸುತ್ತಿಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದನಾ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಆ ಬಗ್ಗೆ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಕೆ ಹಾಗೂ ತಮಿಳುನಾಡಿನ ಹೊಸೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿರುವ ಸತೀಶ್ ಇಬ್ಬರೂ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net