'ರಾಣಿ'ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

Untitled 3
ಶವ ಹೂತಿಟ್ಟ ಪ್ರದೇಶದಲ್ಲಿ ಪೊಲೀಸರ ಪರಿಶೀಲನೆ ಹಾಗೂ ಜಮಾಯಿಸಿದ್ದ ಸ್ಥಳೀಯರು.
Published on

ಮಂಡ್ಯ: ದೇವಸ್ಥಾನದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದು ಜೈಲುಪಾಲಾಗಿದ್ದವ 'ರಾಣಿ'ಯನ್ನು ಕೊಂದು ಹೂತಿಟ್ಟಿದ್ದ ವಿಷಯ ಬೆಳಕಿಗೆ ಬಂದಿದ್ದು, ಇಂದು ಪೊಲೀಸರು ಆಕೆಯ ಶವವನ್ನು ಹೊರತೆಗೆದು ಮಹಜರು ನಡೆಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಶಿವರಾಜು ಅಲಿಯಾಸ್​ ಪಿಚ್ಚ ಎಂಬ 42 ವರ್ಷದ ವ್ಯಕ್ತಿಯೇ ಆರೋಪಿ. ಈತ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಲ್ಲದೆ ಜೈಲುಪಾಲಾಗಿದ್ದ.

ಅದಕ್ಕೂ ಮೊದಲು ಈತ ತನ್ನ ಪತ್ನಿ ರಾಣಿ (30) ಎಂಬಾಕೆಯನ್ನು ಕೊಲೆಗೈದಿದ್ದಲ್ಲದೆ ಬೇರೆಯವರ ಜಮೀನಿನಲ್ಲಿ ಶವವನ್ನು ಹೂತು ಹಾಕಿದ್ದ. ಸತೀಶ್ ಎಂಬವರ ಜಮೀನಿನಲ್ಲಿ ಹೂತಿಡಲಾಗಿದ್ದ ರಾಣಿಯ ಶವವನ್ನು ಪೊಲೀಸರು ಇಂದು ತಹಶೀಲ್ದಾರ್​ ವಿಜಯಣ್ಣ ಅವರ ಸಮ್ಮುಖದಲ್ಲಿ ಹೊರತೆಗೆದಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net