ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

murder
Published on

ಮಂಡ್ಯ: ತಾಲೂಕಿನ ನವಿಲೆ ಗ್ರಾಮದ ಶಿಂಷಾ ನದಿ ದಡದಲ್ಲಿದ್ದ ಬೈಕ್ ಮತ್ತು ರಕ್ತದ ಕಲೆಯನ್ನ ಬೆನ್ನಟ್ಟಿದ್ದ ಪೊಲೀಸರು ಕೈಗೆ ಭೀಕರವಾಗಿ ಕೊಲೆಯಾಗಿದ್ದ ವಕೀಲನ ಶವ ಸಿಕ್ಕಿದೆ!

ಶಿಂಷಾ ನದಿಯಲ್ಲಿ ಶನಿವಾರ ಪತ್ತೆಯಾದ ಶವ ವಕೀಲ ರವೀಂದ್ರ (50) ಅವರದ್ದೆಂದು ತಿಳಿದು ಬಂದಿದೆ. ಶನಿವಾರ ಮಧ್ಯಾಹ್ನ ಕುರಿಗಳಿಗೆ ಸೊಪ್ಪು ತರಲೆಂದು ಹೋಗಿದ್ದ ರವೀಂದ್ರ ಅವರನ್ನು ಬೈಕ್​ನಿಂದ ಕೆಳಗಿಳಿಸಿ, ಸುಮಾರು 50 ಮೀಟರ್​ನಷ್ಟು ದೂರಕ್ಕೆ ಎಳೆದೊಯ್ದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಗುರುತು ಪತ್ತೆ ಆಗದಿರಲೆಂದು ಮುಖವನ್ನು ಕಲ್ಲಿನಿಂದ ಜಜ್ಜಿದ್ದಾರೆ. ನೀರಿನಲ್ಲಿ ತೇಲದಿರಲೆಂದು ಮೃತದೇಹಕ್ಕೆ ಭಾರಿ ಗಾತ್ರದ ಕಲ್ಲನ್ನು ಕಟ್ಟಿ ಶಿಂಷಾ ನದಿಗೆ ಎಸೆದು ಪರಾರಿಯಾಗಿದ್ದಾರೆ. ಇದನ್ನೂ ಓದಿರಿ ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ರವೀಂದ್ರ ಅವರು ಮಧ್ಯಾಹ್ನವಾದರೂ ಊಟಕ್ಕೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಕರೆ ಮಾಡಿದಾಗ ಅವರ ಮೊಬೈಲ್​ ಸ್ವಿಚ್ಡ್​ ಆಫ್​ ಆಗಿತ್ತು. ಇದರಿಂದ ಆತಂಕಗೊಂಡು ತೋಟದ ಬಳಿ ಹೋಗಿ ಪರಿಶೀಲಿಸಿದಾಗ ಶಿಂಷಾ ನದಿ ದಡದಲ್ಲಿ ಬೈಕ್​ ಮತ್ತು ರಕ್ತದ ಕಲೆ ಪತ್ತೆಯಾಗಿತ್ತು. ಅನುಮಾನಗೊಂಡ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದು, ಶನಿವಾರ ತಡರಾತ್ರಿ ಮೃತದೇಹ ಪತ್ತೆಯಾಗಿದೆ.

ಎಸ್ಪಿ ಪರಶುರಾಮ, ಸಿಪಿಐ ಕೆ.ಆರ್​.ಪ್ರಸಾದ್​ ಸ್ಥಳಕ್ಕೆ ಭೇಟಿ ನೀಡಿದ್ದರು. ಶವವನ್ನು ನಂದಿಯಿಂದ ಮೇಲೆತ್ತಿ ಪರಿಶೀಲಿಸಿದಾಗ ಮೃತರ ಗುರುತು ಪತ್ತೆಯಾಯಿತು. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ವೈದ್ಯಕಿಯ ಪರೀಕ್ಷೆ ನಡೆಸಲಾಯಿತು. ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ, ಮರಳು ದಂಧೆ ವಿರುದ್ಧ ರವೀಂದ್ರ ದ್ವನಿಯತ್ತಿದ್ದರು. ಯಾರೋ ಹಳೇ ದ್ವೇಷದಿಂದ ಕೊಲೆಗೈದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಸ್ತೂರು ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net