

ಕೊಡಗು: ಮತ್ತು ಬರುವ ಪದಾರ್ಥಗಳಿಗೆ ದಾಸನಾಗುವ ವ್ಯಕ್ತಿಯು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತಾನೆ. ಇಂತಹ ವ್ಯಸನಿಗಳಿಂದ ಒಂದು ಕುಟುಂಬವೇ ನಾಶವಾಗುತ್ತದೆ. ಅದರಲ್ಲೂ ವ್ಯಸನ ಪದಾರ್ಥ ಸರಿಯಾದ ಸಮಯಕ್ಕೆ ಸಿಗದಿದ್ದರೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುವ ವ್ಯಕ್ತಿ ಎಷ್ಟು ಭಯಾನಕವಾಗಿ ವರ್ತಿಸುತ್ತಾನೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಮದ್ಯ ವ್ಯಸನಿಯೊಬ್ಬ ತನ್ನ ಕಾಲನ್ನು ತಾನೇ ಕಡಿದುಕೊಂಡಿದ್ದಾನೆ. ಈ ಘಟನೆ ಕೊಡಗು ಜಿಲ್ಲೆ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್(40) ಕಾಲು ಕಡಿದುಕೊಂಡ ವ್ಯಕ್ತಿ. ಬಲಗಾಲಿನ ಪಾದವನ್ನೇ ಕತ್ತರಿಸಿಕೊಂಡಿದ್ದಾನೆ. ಈತ ಮನೆಯಲ್ಲಿ ತಾಯಿ ಜತೆ ವಾಸವಿದ್ದ. ಕಾಲು ಕತ್ತರಿಸಿ ಕೈಯ್ಯಲ್ಲಿ ಹಿಡಿದಿದ್ದ ಭೂಪ, ಇದೀಗ ಗಂಭೀರ ಸ್ಥಿತಿಯಲ್ಲಿ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. (ದಿಗ್ವಿಜಯ ನ್ಯೂಸ್)