ಬಿಕಿನಿ ಗರ್ಲ್​ ಜಾಹ್ನವಿ ಕಪೂರ್​ ಕೈಹಿಡಿದಿರುವ ನಿಗೂಢ ವ್ಯಕ್ತಿ ಯಾರು?: ಫೋಟೋ ಹಿಂದೆ ಬಿದ್ದ ನೆಟ್ಟಿಗರು! ​

Bikini Girl
Published on

ಮುಂಬೈ: ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್​ ಪುತ್ರಿಯಾದ ಜಾಹ್ನವಿ ಕಪೂರ್ ದಡಕ್​ ಚಿತ್ರದ ಮೂಲಕ ಬಾಲಿವುಡ್​ ಪ್ರವೇಶಿಸಿದರು. ಮೊದಲ ಚಿತ್ರದಲ್ಲಿ ಯಶಸ್ಸು ಗಳಿಸಿದ ಜಾಹ್ನವಿ ಇಂದು ಬಿಟೌನ್​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಅಲ್ಲದೆ, ಇತರೆ ಚಿತ್ರರಂಗದಿಂದಲೂ ಜಾಹ್ನವಿಗೆ ಸಿನಿಮಾ ಆಫರ್​ಗಳು ಹರಿದುಬರುತ್ತಿವೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಜಾಹ್ನವಿ, ಇತ್ತೀಚೆಗಷ್ಟೇ ಒಂದಿಷ್ಟು ಹೊಸ ಫೋಟೋಗ್ರಾಫ್​ಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೀಚ್​ನಲ್ಲಿ ಬಿಕಿನಿ ಉಡುಗೆಯಲ್ಲಿ ಜಾಹ್ನವಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಸದ್ಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಅದರಲ್ಲೊಂದು ಫೋಟೋ ನೆಟ್ಟಿಗರ ಹುಬ್ಬೇರಿಸಿದೆ.

ಹುಬ್ಬೇರಿಸಿರುವ ಫೋಟೋದಲ್ಲಿ ಜಾಹ್ನವಿ ಬಿಕಿನಿ ಉಡುಗೆಯಲ್ಲಿ ನಿಗೂಢ ವ್ಯಕ್ತಿಯೊಬ್ಬರ ಕೈಹಿಡಿದು ಕ್ಯಾಮೆರಾಗೆ ಬೆನ್ನು ಮಾಡಿ ಓಡುತ್ತಿದ್ದಾರೆ. ಇದೀಗ ಫೋಟೋದಲ್ಲಿರುವ ಆ ನಿಗೂಢ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ನೆಟ್ಟಿಗರು ಉತ್ತರ ಹುಡುಕುತ್ತಿದ್ದಾರೆ.

ಅಂದಹಾಗೆ ಫೋಟೋದಲ್ಲಿರುವ ನಿಗೂಢ ವ್ಯಕ್ತಿಯ ಹೆಸರು ಒರ್ಹಾನ್​ ಅವತ್ರಾಮಣಿ. ಈತ ಜಾಹ್ನವಿ ಸ್ನೇಹಿತ. ಇಬ್ಬರು ಕೈಹಿಡಿದುಕೊಂಡು ಸೂರ್ಯಾಸ್ತದ ಕಡೆ ಓಡುತ್ತಿರುವ ಫೋಟೋ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಜಾಹ್ನವಿ ಕಪೂರ್​ ಕೊನೆಯದಾಗಿ ಹಾರ್ದಿಕ್​ ಮೆಹ್ತಾ ನಿರ್ದೇಶನದ ಹಾರರ್​-ಕಾಮಿಡಿ ಚಿತ್ರ ರೂಹಿಯಲ್ಲಿ ಕಾಣಿಸಿಕೊಂಡರು. ಮುಂದೆ ಜಾಹ್ನವಿ ಗುಡ್​ ಲಕ್​ ಜೆರ್ರಿ, ದೊಸ್ತಾನಾ 2 ಮತ್ತು ತಾಖತ್​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net