

ನವದೆಹಲಿ: ಗೂಗಲ್ ಬಗ್ಗೆ ಯಾರಿಗೂ ಪರಿಚಯ ಮಾಡಿ ಕೊಡಲೇ ಬೇಕಿಲ್ಲ. ಏಕೆಂದರೆ ಇಂದು ಗೂಗಲ್ ಪ್ರತಿಯೊಬ್ಬರ ಕೈಬೆರಳನ್ನು ತಲುಪಿದೆ. ಜನರು ಕೇಳುವ ಯಾವುದೇ ಪ್ರಶ್ನೆಗೆ ಗೂಗಲ್ ಬಳಿ ಉತ್ತರ ಇದ್ದೇ ಇರುತ್ತದೆ.
ಆದರೆ, ಗೂಗಲ್ ನೀಡುವ ಎಲ್ಲ ಮಾಹಿತಿಯು ಕೂಡ ನಿಜವಾಗಿರುವುದಿಲ್ಲ. ಏಕೆಂದರೆ, ಸೈಬರ್ ಖದೀಮರು ಜನರಿಗೆ ವಂಚನೆ ಮಾಡಲೆಂದೇ ಬ್ಯಾಂಕ್ ವಿಳಾಸ, ಬ್ರ್ಯಾಂಡ್ ಕಂಪನಿಗಳ ಕಸ್ಟಮರ್ ಕೇರ್ ನಂಬರ್ ಸೇರಿದಂತೆ ಅನೇಕ ಮಾಹಿತಿಗಳನ್ನು ಅಪ್ಲೋಡ್ ಮಾಡಿರುತ್ತಾರೆ. ಅಪ್ಪಿತಪ್ಪಿ ಈ ಮಾಹಿತಿಗಳನ್ನು ನಂಬಿ ತಮ್ಮ ಸಮಸ್ಯಗಳನ್ನು ಬಗೆಹರಿಸಿಕೊಳ್ಳಲು ಮುಂದಾದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಸಾವಿಗೂ ದೂಡಬಹುದು.
ಇಂದು ಇಂಟರ್ನೆಟ್ ಎಷ್ಟೇ ಮುಂದುವರಿದಿರಬಹುದು, ಅಷ್ಟೇ ಪ್ರಮಾಣದಲ್ಲಿ ಸೈಬರ್ ಕ್ರೈಂ ತಲೆಎತ್ತಿದ್ದು, ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಇಂತಹ ಪ್ರಕರಣಗಳಲ್ಲಿ ದೂರು ನೀಡಿದರು ಅಪರಾಧದ ಮೂಲ ಪತ್ತೆಹಚ್ಚುವುದು ಕಷ್ಟವಾಗಿದ್ದು, ಸೈಬರ್ ಕ್ರೈಂ ದಿನ ಕಳೆದಂತೆ ತನ್ನ ಕದಂಬಬಾಹುವನ್ನು ವಿಸ್ತರಿಸುತ್ತಿದೆ. ಹೀಗಾಗಿ ಗೂಗಲ್ನಲ್ಲಿ ಸರ್ಚ್ ಮಾಡುವಾಗ ಇಂತಹ ಸೈಬರ್ ವಂಚಕರಿಂದ ಪಾರಾಗಲು ಕೆಲವೊಂದು ಮುಂಜಾಗ್ರತ ಕ್ರಮಗಳು ಈ ಕೆಳಕಂಡಂತಿದೆ.
ಇವುಗಳಲ್ಲದೆ, ಹಣಕಾಸು, ಷೇರು ಮಾರುಕಟ್ಟೆ ಮತ್ತು ಸರ್ಕಾರಿ ವೆಬ್ಸೈಟ್ಗಳಿಗೆ ಸಂಬಂಧಿಸಿದ ವಿವರಗಳ ನಿಖರವಾದ ಯುಆರ್ಎಲ್ಗಳನ್ನು ಹುಡುಕಬೇಕು. (ಏಜೆನ್ಸೀಸ್)