ಹೋಟೆಲ್ ಅಡುಗೆಮನೆ ತೆರೆಯಬಹುದು; ಪಾರ್ಸೆಲ್, ಹೋಮ್ ಡೆಲಿವರಿಗೆ ಮಾತ್ರ ಅವಕಾಶ

Hotel Kitchen
Published on

ಬೆಂಗಳೂರು: ಕರೊನಾ ನಿಯಂತ್ರಣಕ್ಕೆ ಹೊರಡಿಸಲಾಗಿರುವ ನಿರ್ಬಂಧಗಳಲ್ಲಿ ಮೇ 3ರಿಂದ ಕೆಲವು ವಿನಾಯಿತಿ ನೀಡಿದ್ದರೂ, ಹೋಟೆಲ್​ಗಳನ್ನು ತೆರೆಯುವುದರ ಕುರಿತು ಹೆಚ್ಚಿನ ಬದಲಾವಣೆ ಇರುವುದಿಲ್ಲ.

ಹೋಟೆಲ್​ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಬಹುದು ಎಂಬ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸ್ಪಷ್ಟನೆ ನೀಡಿದ್ದಾರೆ. ಕೆಲವು ಆರ್ಥಿಕ ಚಟುವಟಿಕೆಗಳಿಗೆ ವಿನಾಯಿತಿ ನೀಡಿರುವುದರಿಂದ ಅಲ್ಲಿ ಕೆಲಸ ಮಾಡುವವರಿಗೆ, ಕಾರ್ವಿುಕರಿಗೆ, ಸಿಲುಕಿಕೊಂಡ ಕಾರ್ವಿುಕರಿಗೆ ಆಹಾರದ ಅವಶ್ಯಕತೆ ಹೆಚ್ಚಿದೆ. ಇವರೆಲ್ಲರಿಗೂ ಆಹಾರ ಒದಗಿಸುತ್ತಿರುವ ಹೋಟೆಲ್​ಗಳು ಮಾತ್ರ ತೆರೆದಿರಲಿವೆ.

ಆದರೂ, ಸಿದ್ಧಪಡಿಸಿದ ಆಹಾರವನ್ನು ಪಾರ್ಸೆಲ್ ಮಾಡಲು ಅಥವಾ ಹೋಮ್ ಡೆಲಿವರಿ ಮಾಡುವ ಸಲುವಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳ ಅಡುಗೆ ಮನೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಎಲ್ಲ ಹಂತದಲ್ಲೂ, ಕರೊನಾ ನಿಯಂತ್ರಣಕ್ಕೆ ಸೂಚಿಸಲಾಗಿರುವ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net