More

    ಅಂತೂ ಸಿಕ್ತು ಕಿಮ್ ಜಾಂಗ್​ ಉನ್​ ಕಣ್ಮರೆಯಾಗಿದ್ದಕ್ಕೆ ನಿಜವಾದ ಕಾರಣ; ಸಿಯೋಲ್​ನ ಎನ್​​ಐಎಸ್ ಹೇಳಿದ್ದು ಇದು

    ಸಿಯೋಲ್​: ಏಪ್ರಿಲ್​ 11ರ ನಂತರ ಏಕಾಏಕಿ ಕಣ್ಮರೆಯಾಗುವ ಮೂಲಕ ಬಹುದೊಡ್ಡ ಸುದ್ದಿಯಾಗಿದ್ದರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​.

    ಅದರ ಬೆನ್ನಲ್ಲೇ ಅವರ ಆರೋಗ್ಯದ ಬಗ್ಗೆ ವೀಪರೀತ ರೂಮರ್​ಗಳು ಹಬ್ಬಿದ್ದವು. ಕಿಮ್​ಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಸರ್ಜರಿ ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಹಾಗಾಗಿಯೇ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳತ್ತಿಲ್ಲ ಎಂದು ವರದಿಯಾಗಿತ್ತು. ಅಷ್ಟೇ ಏನು…ಅಲ್ಲಿನ ಕೆಲವು ಮಾಧ್ಯಮಗಳಂತೂ ಕಿಮ್ ಸತ್ತೇ ಹೋಗಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಬರೆದಿದ್ದವು.

    ಇದನ್ನೂ ಓದಿ: ನಿಗೂಢವಾಗಿಯೇ ಉಳಿಯುತ್ತಿದ್ದಾರೆ ಕಿಮ್​ ಜಾಂಗ್​ ಉನ್​…! ಈಗ ಅಮೆರಿಕ ಅಧ್ಯಕ್ಷ ಟ್ರಂಪ್​ ಮಾತು ಅನುಮಾನ ಹುಟ್ಟುಹಾಕಿದೆ…

    ಆದರೆ ಎಲ್ಲರ ಲೆಕ್ಕಾಚಾರಗಳೂ ತಲೆಕೆಳಗಾಗುವಂತೆ ಕಿಮ್​ ಮೇ 2ರಂದು ಮತ್ತೆ ಪ್ರತ್ಯಕ್ಷರಾಗಿದ್ದರು. ಪ್ಯೊಂಗ್​ಯಾಂಗ್​ ಸಮೀಪದ ಸುಂಚೊನ್​ ನಗರದಲ್ಲಿ ನಡೆದ ಗೊಬ್ಬರ ಕಾರ್ಖಾನೆಯೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದರು.

    ಆದರೆ ಇಷ್ಟು ದಿನ ಕಿಮ್​ ಎಲ್ಲಿದ್ದರು? ಅವರಿಗೆ ಏನಾಗಿತ್ತು? ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದೇಕೆ ಎಂಬಿತ್ಯಾದಿ ಪ್ರಶ್ನೆಗಳು ಹಾಗೇ ಉಳಿದುಹೋಗಿದ್ದವು.

    ಇದನ್ನೂ ಓದಿ: ಕಿಮ್​ ಜಾಂಗ್​ ಉನ್ ಬದುಕಿದ್ದಾರೋ ಇಲ್ಲವೊ? ಭದ್ರತಾ ಸಲಹೆಗಾರ ಹೇಳಿದ್ದೇನು?

    ಇದೀಗ ಸಿಯೋಲ್​ನ ರಾಷ್ಟ್ರೀಯ ಗುಪ್ತಚರ ಸೇವಾ ಇಲಾಖೆ (NIS) ಕಿಮ್​ ಕಣ್ಮರೆಯಾಗಲು ನಿಜವಾದ ಕಾರಣವನ್ನು ಬಿಚ್ಚಿಟ್ಟಿದೆ.

    ಕಿಮ್ ಆರೋಗ್ಯ ಹದಗೆಟ್ಟಿತ್ತು. ಅವರಿಗೆ ಹಾರ್ಟ್ ಸರ್ಜರಿಯಾಗಿತ್ತು ಎಂಬಂತಹ ವರದಿಗಳಿಗೆ ಯಾವುದೇ ಆಧಾರವಿಲ್ಲ. ಇವೆಲ್ಲ ಹುರುಳಿಲ್ಲದ ಸುದ್ದಿಗಳು ಎಂದು ಎನ್​​ಐಎಸ್ ತಿಳಿಸಿದೆ.

    ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಿಮ್​ ಸಾರ್ವಜನಿಕ ಜೀವನದಿಂದ ದೂರ ಸರಿದಿದ್ದರು. ಯಾರೂ ಗುಂಪುಗೂಡಬಾರದು, ಯಾವುದೇ ಕಾರ್ಯಕ್ರಮಗಳನ್ನೂ ನಡೆಸಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದರು. ಆದರೆ ಜನರ ಕಣ್ಣಿಗೆ ಕಾಣದೆ ಇದ್ದರೂ ಅವರು ಇದ್ದಲ್ಲಿಂದಲೇ ದೇಶದ ಆಡಳಿತ ನಡೆಸಿದ್ದಾರೆ. ಕರ್ತವ್ಯ ನಿಭಾಯಿಸಿದ್ದಾರೆ. ಮಿಲಿಟರಿ ಪಡೆಗಳು, ಆಂತರಿಕ ವ್ಯವಹಾರಗಳ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಎನ್​​ಐಎಸ್ ಕಮಿಟಿಯ ಸದಸ್ಯ ಕಿಮ್ ಬೈಂಗ್-ಕೀ ತಿಳಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಮೂರು ವಾರಗಳಿಂದ ಕಾಣೆಯಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ದಿಢೀರ್​ ಪ್ರತ್ಯಕ್ಷ: ಏನಾಗಿತ್ತು ಕಿಮ್​ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts