More

    ಹುಟ್ಟುವ ಮಕ್ಕಳಿಗೆ ಗನ್​, ಬಾಂಬ್​, ಸ್ಯಾಟಲೈಟ್​ ಎಂದು ಹೆಸರಿಡುವಂತೆ ಕಿಮ್‌ ಜಾಂಗ್‌ ಉನ್‌ ಆದೇಶ!

    ಪ್ಯೊಂಗ್ಯಾಂಗ್: ಸದಾ ಒಂದಿಲ್ಲೊಂದು ವಿಚಿತ್ರ, ಜನರ ಜೀವನವನ್ನು ತಲ್ಲಣಗೊಳಿಸುವ ಆದೇಶ, ಕಾನೂನು ಜಾರಿಗೊಳಿಸುವಲ್ಲಿ ನಿಸ್ಸೀಮರಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಈಗ ಮತ್ತೊಂದು ವಿಚಿತ್ರ ಆದೇಶವನ್ನು ಹೊರಡಿಸಿದ್ದಾರೆ.

    ಒಂದು ಕಡೆ ಕಿಮ್​ ಜಾಂಗ್​ ಉನ್​ ಸರ್ವಾಧಿಕಾರದಿಂದ ಬಳಲುತ್ತಿರುವ ಉತ್ತರ ಕೊರಿಯಾ ಜನರು ಇನ್ನೊಂದು ಕಡೆ ಹಸಿವಿನಿಂದ ನರಳುತ್ತಿದ್ದಾರೆ. ಇತ್ತೀಚೆಗಷ್ಟೇ ಕಡಿಮೆ ಊಟ ಮಾಡುವಂತೆ ದೇಶದ ಜನತೆಗೆ ಕಿಮ್​ ಜಾಂಗ್​ ಸೂಚಿಸಿದ್ದರು. ಇಷ್ಟೆಲ್ಲ ಸಮಸ್ಯೆಯಿದ್ದರೂ ಯಾವೊಂದು ದೇಶವು ಕೂಡ ಕೊರಿಯಾ ಜನರಿಗೆ ನೆರವಾಗಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಸರ್ವಾಧಿಕಾರಿ ಕಿಮ್​ ಜಾಂಗ್​ ಅದಕ್ಕೆ ಬಿಡುವುದಿಲ್ಲ.

    ಇನ್ನು ಉತ್ತರ ಕೊರಿಯಾ ಜನರು ಏನು ತಿನ್ನಬೇಕು? ಯಾವ ಬಟ್ಟ ಧರಿಸಬೇಕು? ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಕಿಮ್​ ಜಾಂಗ್​ ಉನ್​ ನಿರ್ಧರಿಸುತ್ತಾನೆ. ಅಲ್ಲಿ ಏನು ನಡೆಯುತ್ತಿದೆ ಎಂಬುದು ಸಹ ಕೆಲವೊಮ್ಮೆ ಜಗತ್ತಿಗೆ ತಿಳಿಯುವುದಿಲ್ಲ. ಇದೀಗ ಮತ್ತೊಂದು ವಿಚಿತ್ರ ಆದೇಶವನ್ನು ಕಿಮ್​ ಜಾಂಗ್​ ಹೊರಡಿಸಿದ್ದಾನೆ.

    ದೇಶದಲ್ಲಿ ಹುಟ್ಟುವ ಮಕ್ಕಳಿಗೆ ಗನ್​, ಬಾಂಬ್​, ಸ್ಯಾಟಲೈಟ್ ಮುಂತಾದ ದೇಶ ಪ್ರೇಮದ ಹೆಸರುಗಳನ್ನು ಇಡುವಂತೆ ಕಿಮ್​ ಜಾಂಗ್​ ಆದೇಶಿಸಿದ್ದಾರೆ. ಇದನ್ನು ಪಾಲಿಸದೇ ಹೋದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ರವಾನಿಸಿದ್ದಾನೆ.

    ಆದೇಶದ ಬೆನ್ನಲ್ಲೇ ಈಗಾಗಲೇ ಹೆಸರಿಟ್ಟಿರುವ ಮಕ್ಕಳ ಹೆಸರನ್ನು ಬದಲಾಯಿಸುವಂತೆ ಉತ್ತರ ಕೊರಿಯಾ ಅಧಿಕಾರಿಗಳು ಪಾಲಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ದೇಶಭಕ್ತಿ ಮತ್ತು ಸೈದ್ಧಾಂತಿಕ ಆಧಾರದ ಮೇಲೆ ಖಂಡಿತವಾಗಿ ಹೆಸರಿಡಬೇಕೆಂದು ಕಟ್ಟುನಿಟ್ಟಿನ ಅಪ್ಪಣೆ ಮಾಡಲಾಗಿದೆ. (ಏಜೆನ್ಸೀಸ್​)

    ಬೆಂಗಳೂರಲ್ಲಿ ಮೋದಿ ಆಸ್ಪತ್ರೆಗೆ ಏಕಾಏಕಿ ಬೀಗ: ಸಿಬ್ಬಂದಿ ಬದುಕು ಅತಂತ್ರ, 3 ದಿನದಿಂದ ಬಾಗಿಲಲ್ಲೇ ಕುಳಿತು ಪ್ರತಿಭಟನೆ

    ಇದು ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಹೊಸ ಟೆಕ್ನಿಕ್​ ಅಂತೆ!​ ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ

    ಲೇಡಿ ಪಿಎಸ್​ಐ ಕಿರುಕುಳ ಕೊಡುತ್ತಿದ್ದಾರೆ… ಡೆತ್​ನೋಟ್​ ಬರೆದಿಟ್ಟು ನಾಪತ್ತೆಯಾಗಿದ್ದ ಸಿರಿವಾರದ ಯುವಕ 3 ದಿನದ ಬಳಿಕ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts