More

    ಬೆಂಗಳೂರಲ್ಲಿ ಮೋದಿ ಆಸ್ಪತ್ರೆಗೆ ಏಕಾಏಕಿ ಬೀಗ: ಸಿಬ್ಬಂದಿ ಬದುಕು ಅತಂತ್ರ, 3 ದಿನದಿಂದ ಬಾಗಿಲಲ್ಲೇ ಕುಳಿತು ಪ್ರತಿಭಟನೆ

    ಬೆಂಗಳೂರು: ನಗರದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಯೊಂದಕ್ಕೆ ಏಕಾಏಕಿ ಬೀಗ ಹಾಕಲಾಗಿದ್ದು, 80 ಸಿಬ್ಬಂದಿ ಜೀವನ ಅತಂತ್ರಕ್ಕೆ ಸಿಲುಕಿದೆ. ನವೆಂಬರ್ ತಿಂಗಳ ವೇತನ ಇಲ್ಲದೆ ಪರದಾಡುತ್ತಿದ್ದಾರೆ.

    ರಾಜಾಜಿನಗರದಲ್ಲಿರುವ ಮೋದಿ ಕಣ್ಣಿನ ಆಸ್ಪತ್ರೆಗೆ ಶುಕ್ರವಾರ ರಾತ್ರಿ ಕೌಟುಂಬಿಕ ಕಿತ್ತಾಟದಿಂದ ಏಕಾಏಕಿ ಬೀಗ ಹಾಕಲಾಗಿದ್ದು, ಆಸ್ಪತ್ರೆ ಓಪನ್ ಮಾಡುವಂತೆ ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಶುಕ್ರವಾರ ಸಂಜೆ 6 ಗಂಟೆಗೆ ನಾವು ಕೆಲಸ ಮುಗಿಸಿಕೊಂಡು ಮನೆಗೆ ಹೋದೆವು. ಬಳಿಕ ಬಂದ ಸುಭಾಷ್ ಮೋದಿ ಮತ್ತು ಇವರ ಪುತ್ರಿ ಪ್ರಿಯದರ್ಶಿನಿ ನೇತೃತ್ವದ ತಂಡ, ಆಸ್ಪತ್ರೆಯ ಬೀಗ ಹೊಡೆದು ಒಳ ಹೋದರು. ಕೆಲ ದಾಖಲೆ, ಹಣವನ್ನೂ ತೆಗೆದುಕೊಂಡು ವಾಪಸ್​ ಹೋಗಿದ್ದಾರೆ. ಈ ವೇಳೆ ಕೋರ್ಟ್​ನಲ್ಲಿ ಕೇಸ್​ ನಮ್ಮ ಪರ ಆಗಿದೆ. ಈ ಆಸ್ಪತ್ರೆ ನಮಗೆ ಸೇರಿದ್ದು ಎಂದು ಬೀಗ ಜಡಿದಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ವಿವರಿಸಿದರು.

    ಬೆಂಗಳೂರಲ್ಲಿ ಮೋದಿ ಆಸ್ಪತ್ರೆಗೆ ಏಕಾಏಕಿ ಬೀಗ: ಸಿಬ್ಬಂದಿ ಬದುಕು ಅತಂತ್ರ, 3 ದಿನದಿಂದ ಬಾಗಿಲಲ್ಲೇ ಕುಳಿತು ಪ್ರತಿಭಟನೆ

    ಶನಿವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದಾಗ ಆಸ್ಪತ್ರೆಗೆ ಬೀಗ ಹಾಕಿದ್ದರು. ನಮಗೆ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ. ನಮ್ಮಲ್ಲಿ ನಾಲವ್ರನ್ನು ಕೆಲಸದಿಂದ ತೆಗೆದಿದ್ದಾರಂತೆ. ನಿಮ್ಮ ಪರವಾಗಿ ನಾವಿದ್ದೇವೆ, ಕೆಲಸಕ್ಕೆ ಬನ್ನಿ ಎಂದು ಸುಭಾಷ್ ಮೋದಿ ಮತ್ತು ಪ್ರಿಯದರ್ಶಿನಿ ಹೇಳಿದರು. ಒಳಗೆ ಏನೇನು ಹೋಗಿದೆಯೋ ನಮಗೆ ಗೊತ್ತಿಲ್ಲ. ನಾವೀಗ ಒಳಗೆ ಹೋಗೋದು, ಆಮೇಲೆ ಅದಿಲ್ಲ ಇದಿಲ್ಲ ಅಂದ್ರೆ ನಮಗೆ ಕಷ್ಟ ಆಗುತ್ತೆ. ಅಲ್ಲದೆ ಎಲ್ಲರನ್ನೂ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ನಾವು ಆಗ್ರಹಿಸಿದೆವು. ಇದಕ್ಕೆ ಒಪ್ಪದ ಅವರು, ನಾಲ್ವರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ. ಇಷ್ಟ ಇದ್ದರೆ ಬಂದು ಕೆಲಸ ಮಾಡಿ, ಇಲ್ಲಾಂದ್ರೆ ಬೇರೆಯವರನ್ನ ಕೆಲಸಕ್ಕೆ ತಗೋತೀವಿ ಎಂದು ಬೆದರಿಕೆ ಹಾಕಿದರು ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

    ಶನಿವಾರದಿಂದ ಮನೆಗೆ ತೆರಳದೆ ಆಸ್ಪತ್ರೆ ಸಿಬ್ಬಂದಿ ಬಾಗಿಲಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ನವೆಂಬರ್ ತಿಂಗಳ ವೇತನ ಇಲ್ಲದೆ ಪರದಾಡುತ್ತಿದ್ದಾರೆ.

    ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

    ಲೇಡಿ ಪಿಎಸ್​ಐ ಕಿರುಕುಳ ಕೊಡುತ್ತಿದ್ದಾರೆ… ಡೆತ್​ನೋಟ್​ ಬರೆದಿಟ್ಟು ನಾಪತ್ತೆಯಾಗಿದ್ದ ಸಿರಿವಾರದ ಯುವಕ 3 ದಿನದ ಬಳಿಕ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts