More

    ಲೇಡಿ ಪಿಎಸ್​ಐ ಕಿರುಕುಳ ಕೊಡುತ್ತಿದ್ದಾರೆ… ಡೆತ್​ನೋಟ್​ ಬರೆದಿಟ್ಟು ನಾಪತ್ತೆಯಾಗಿದ್ದ ಸಿರಿವಾರದ ಯುವಕ 3 ದಿನದ ಬಳಿಕ ಪತ್ತೆ!

    ರಾಯಚೂರು: ಲೇಡಿ ಪಿಎಸ್‌ಐ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಮೂರು ದಿನದ ಬಳಿಕ ಪತ್ತೆಯಾಗಿದ್ದು, ಕುಟುಂಬಸ್ಥರು ಮತ್ತು ಪಿಎಸ್​ಐ ನಿಟ್ಟುಸಿರು ಬಿಟ್ಟಿದ್ದಾರೆ.

    ರಾಯಚೂರು ಜಿಲ್ಲೆಯ ಸಿರವಾರದ ತಾಯಣ್ಣ ಎಂಬಾತ ಡೆತ್​ನೋಟ್ ಬರೆದಿಟ್ಟು ಡಿಸೆಂಬರ್ 3ರಂದು ಬೆಳಗಿನ ಜಾವ ನಾಪತ್ತೆಯಾಗಿದ್ದ. ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿದ್ದ ಆರೋಪವನ್ನು ತಾಯಣ್ಣ ಹೊತ್ತಿದ್ದ. ದೂರು ನೀಡಿದ ಹಿನ್ನೆಲೆಯಲ್ಲಿ ಡಿ.2ರಂದು ತಾಯಣ್ಣನನ್ನು ಪಿಎಸ್​ಐ ಗೀತಾಂಜಲಿ ಶಿಂಧೆ ಠಾಣೆಗೆ ಕರೆಸಿದ್ದರು. ಇದಾದ ಮರುದಿನ ಡೆತ್​ನೋಟ್​ ಬರೆದಿಟ್ಟು ನಾಪತ್ತೆಯಾಗಿದ್ದ.

    ‘ಸಿರವಾರ ಠಾಣೆಯ ಪಿಎಸ್​ಐ ಗೀತಾಂಜಲಿ ಶಿಂಧೆ ಅವರು ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಪಿಎಸ್​ಐ ಗೀತಾಂಜಲಿ ಶಿಂಧೆ ಅವರೇ ಕಾರಣ. ನನಗೆ ನಿರಂತರ ಕಿರುಕುಳ ನೀಡುತ್ತಿದ್ದು, ದೌರ್ಜನ್ಯ ಎಸಗುತ್ತಿದ್ದಾರೆ. ಇದರಿಂದ ಭಯಭೀತನಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಹೊರಗಡೆ ಹೋದಾಗಲೆಲ್ಲ ಜೀಪ್​ ನಿಲ್ಲಿಸಿ, ನನಗೆ ಹೊಡೆದಂತಹ ಅನೇಕ ಪ್ರಸಂಗಗಳು ಇವೆ. ಅದನ್ನು ಈವರೆಗೂ ನಾನು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ನಾನು ಬಹಳಷ್ಟು ನೊಂದಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರದಲ್ಲಿ ಬರೆದಿದ್ದ.

    ‘ಡಿ.2ರ ಸಾಯಂಕಾಲ ನನ್ನನ್ನು ಠಾಣೆಗೆ ಕರೆಸಿದರು. ನಾನು ಮಾವನ ಮನೆಯಿಂದ ನೇರವಾಗಿ ಪೊಲೀಸ್​ ಠಾಣೆಗೆ ಹೋದೆ. ಆದರೆ, ನನ್ನನ್ನು ವಿಚಾರಣೆ ಮಾಡದೇ ಲಾಕಪ್​ನಲ್ಲಿ ಕೆಲ ಕಾಲ ಕೂರಿಸಿ ಹಿಂಸೆ ನೀಡಿದರು. ಸ್ವಲ್ಪ ಸಮಯದ ಬಳಿಕ ನನ್ನನ್ನು ಬಿಡುಗಡೆ ಮಾಡಿದರು. ಆದರೆ, ಯಾವುದೇ ವಿಚಾರಣೆ ಮಾತ್ರ ಮಾಡಲಿಲ್ಲ. ಇದರಿಂದ ನಾನು ಬಹಳ ನೊಂದಿದ್ದೇನೆ. ನನ್ನನ್ನು ಏಕಾಏಕಿ ಲಾಕಪ್​ನಲ್ಲಿ ಹಾಕಿದ್ದಾರೆ. ಇದು ತುಂಬಾ ನೋವಾಗಿದೆ. ಗೀತಾಂಜಲಿ ಅವರು ನನಗೆ 3 ತಿಂಗಳಿಂದ ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ. ಯಾವ ದಾರಿಯಲ್ಲೂ ಕಂಡರೂ ಒದ್ದು ಒಳಗೆ ಹಾಕುತ್ತೇನೆ ಎಂದು ಬೆದರಿಸಿದ್ದಾರೆ. ಇದನ್ನು ನಾನು ಯಾರಿಗೂ ಹೇಳಲಾಗದೇ ಮನಸ್ಸಿನಲ್ಲೇ ಕೊರಗುತ್ತಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಎರಡು ಪುಟಗಳ ಸುದೀರ್ಘ ಡೆತ್​ ನೋಟ್​ ಬರೆದಿದ್ದ ತಾಯಣ್ಣ, ಕೊನೆಯಲ್ಲಿ ನನ್ನ ಎಲ್ಲ ಕುಟುಂಬ ಸದಸ್ಯರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಇದೇ ನನ್ನ ಕೊನೆಯ ಬರಹ ನೋಡಿಕೊಳ್ಳಿ. ಮಿಸ್​ ಯು ಅಮ್ಮ’ ಎಂದು ಬರೆದಿದ್ದ.

    ಈ ಸುದ್ದಿ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಪೊಲೀಸರು ಮತ್ತು ತಾಯಣ್ಣನ ಕುಟುಂಬಸ್ಥರು ತಾಯಣ್ಣನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮಗನಿಗೆ ಏನಾಯ್ತು? ಎಂಬ ಆತಂಕದಲ್ಲೇ ಕುಟುಂಬಸ್ಥರು ಇದ್ದರು. ಆತ್ಮಹತ್ಯೆ ನಿರ್ಧಾರ ಬದಲಿಸಿದ ತಾಯಣ್ಣ, ಪಿಎಸ್‌ಐ ಗೀತಾಂಜಲಿ ಶಿಂಧೆ ವಿರುದ್ಧ ಡಿಐಜಿಗೆ ದೂರು ನೀಡಲು ಬಳ್ಳಾರಿಗೆ ತೆರಳಿದ್ದ. ಅತ್ತ ಯುವಕ ನಾಪತ್ತೆ ಹಿನ್ನೆಲೆ ಸಿರವಾರ ಠಾಣೆ ಪಿಎಸ್​ಐ ಗೀತಾಂಜಲಿ ಶಿಂಧೆ ವಿರುದ್ಧ ಈಗಾಗಲೇ ಎಫ್‌‌ಐಆರ್ ದಾಖಲಾಗಿತ್ತು. ಬಳ್ಳಾರಿಯಲ್ಲಿ ಪತ್ತೆಯಾದ ಯುವಕನನ್ನು ಸಿರವಾರಕ್ಕೆ ಪೊಲೀಸರು ಕರೆದುಕೊಂಡು ಬಂದಿದ್ದು, ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ.

    7 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವತಿ ಗಂಡನ ಮನೆಯಲ್ಲಿ ದುರಂತ ಅಂತ್ಯ!

    ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts