More

    ಉತ್ತರ ಕೊರಿಯಾದಿಂದ ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ: ಉಪಗ್ರಹ ಚಿತ್ರ ಬಿಡುಗಡೆ ಮಾಡಿದ ಅಮೆರಿಕ

    ವಾಷಿಂಗ್ಟನ್​/ಮಾಸ್ಕೋ: ರಷ್ಯಾ ಮತ್ತು ಉತ್ತರ ಕೊರಿಯಾ ನಡುವೆ ಶಸ್ತ್ರಾಸ್ತ್ರ ಒಪ್ಪಂದ ನಡೆದಿರುವ ಬಗ್ಗೆ ವರದಿಗಳು ಪ್ರಸಾರವಾದ ಬೆನ್ನಲ್ಲೇ, ಉತ್ತರ ಕೊರಿಯಾ ಹಡಗಿನ ಮೂಲಕ ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ. ಅಲ್ಲದೆ, ತಮ್ಮ ವಾದಕ್ಕೆ ಸಾಕ್ಷಿಯಾಗಿ ಶನಿವಾರ ಉಪಗ್ರಹ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ.

    ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತರಾ ಜಾನ್​ ಕಿರ್ಬಿ ಮಾತನಾಡಿದ್ದು, ಉತ್ತರ ಕೊರಿಯಾ ಇತ್ತೀಚಿನ ವಾರಗಳಲ್ಲಿ 1,000ಕ್ಕೂ ಅಧಿಕ ಮಿಲಿಟರಿ ಉಪಕರಣಗಳು ಮತ್ತು ಯುದ್ಧಸಾಮಗ್ರಿಗಳನ್ನು ರಷ್ಯಾಕ್ಕೆ ಪೂರೈಸಿರುವ ಬಗ್ಗೆ ನಮಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.

    ಕೊರಿಯಾ, ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿರುವುದು ಒಂದು ಆಘಾತಕಾರಿ ಬೆಳವಣಿಗೆ ಎಂದಿರುವ ಶ್ವೇತಭವನ, ಉಭಯ ದೇಶಗಳ ನಡುವಿನ ಮಿಲಿಟರಿ ಸಂಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಉತ್ತರ ಕೊರಿಯಾದ ಯುದ್ಧಸಾಮಗ್ರಿ ಡಿಪೋದಿಂದ ರಷ್ಯಾದ ಧ್ವಜವಿರುವ ಹಡಗಿಗೆ ಲೋಡ್ ಮಾಡಲಾಗುತ್ತಿರುವ ಮತ್ತು ಸಾಗಣೆಯನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಸಹ ಅಮೆರಿಕ ಬಿಡುಗಡೆ ಮಾಡಿದೆ. ಯೂಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವುದರ ನಡುವೆಯೇ ಸೆ.7 ಮತ್ತು ಅ.1ರ ಮಧ್ಯೆ ಶಸ್ತ್ರಾಸ್ತ್ರ ಸಾಗಾಟ ನಡೆದಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ; ಇಂದಿನಿಂದ ಮುಂದಿನ ವಾರವದವರೆಗೂ ಭಾರೀ ಮಳೆ IMD ಅಲರ್ಟ್​​..!

    America

    ಯೂಕ್ರೇನ್​​ ನಗರಗಳ ಮೇಲೆ ದಾಳಿ ಮಾಡಲು, ಯೂಕ್ರೇನಿಯನ್ ನಾಗರಿಕರನ್ನು ಕೊಲ್ಲಲು ಮತ್ತು ರಷ್ಯಾದ ಕಾನೂನುಬಾಹಿರ ಯುದ್ಧಕ್ಕೆ ಬಳಸಲಾಗುವ ಈ ಮಿಲಿಟರಿ ಉಪಕರಣಗಳನ್ನು ರಷ್ಯಾಕ್ಕೆ ಒದಗಿಸಿದ್ದಕ್ಕಾಗಿ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾವನ್ನು ಖಂಡಿಸುತ್ತೇವೆ ಎಂದು ಕಿರ್ಬಿ ಹೇಳಿದ್ದಾರೆ.

    ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಯುದ್ಧಸಾಮಗ್ರಿಗಳಿಗೆ ಬದಲಾಗಿ ರಷ್ಯಾದ ಸುಧಾರಿತ ಶಸ್ತ್ರಾಸ್ತ್ರ ತಂತ್ರಜ್ಞಾನಗಳನ್ನು ಪಡೆಯಲು ಬಯಸಿದ್ದಾರೆ ಎಂದು ಅಮೆರಿಕ ನಂಬಿರುವುದಾಗಿ ಕಿರ್ಬಿ ತಿಳಿಸಿದರು. ಅಲ್ಲದೆ, ಉತ್ತರ ಕೊರಿಯಾ ಮತ್ತು ರಷ್ಯಾ ನಡುವಿನ ಆಳವಾದ ಮಿಲಿಟರಿ ಸಂಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

    ಇತ್ತೀಚೆಗಷ್ಟೇ ಕಿಮ್​ ಜಾಂಗ್​ ಉನ್​, ರಷ್ಯಾಗೆ ಪ್ರವಾಸ ಕೈಗೊಂಡಿದ್ದರು. ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರನ್ನು ತಮ್ಮ ಮಿಲಿಟರಿ ಅಧಿಕಾರಿಗಳೊಂದಿಗೆ ಭೇಟಿಯಾಗಿದ್ದರು. ಈ ವೇಳೆ ಉಭಯ ರಾಷ್ಟ್ರಗಳ ನಾಯಕರು ತಮ್ಮ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದ್ದರು. ಇದೇ ವೇಳೆ ಇಬ್ಬರ ನಡುವೆ ಶಸ್ತ್ರಾಸ್ತ್ರ ಒಪ್ಪಂದ ನಡೆದಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ದಕ್ಷಿಣ ಕೊರಿಯಾಗೆ ಅಮೆರಿಕದ ನೌಕಾಪಡೆಯ ಹಡಗಿನ ಆಗಮನ ಹಿನ್ನೆಲೆಯಲ್ಲಿ ಪರಮಾಣು ಪ್ರತಿಕ್ರಿಯೆಯ ಎಚ್ಚರಿಕೆಯನ್ನು ಅಮೆರಿಕಕ್ಕೆ ಉತ್ತರ ಕೊರಿಯಾ ನೀಡಿತ್ತು. ಇದರ ಬೆನ್ನಲ್ಲೇ ಅಮೆರಿಕದಿಂದ ಈ ಗಂಭೀರ ಆರೋಪ ಕೇಳಿಬಂದಿದೆ. (ಏಜೆನ್ಸೀಸ್​)

    Gold Rate Today: ಮಹಾಲಯ ಅಮಾವಾಸ್ಯೆ ದಿನವಾದ ಇಂದು ಚಿನ್ನ, ಬೆಳ್ಳಿ ಬೆಲೆ ಏರಿಕೆ

    ರಾಷ್ಟ್ರ ಧ್ವಜದ ಬಗ್ಗೆ ನಕಲಿ ಪೋಸ್ಟ್​: ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್​ಗೆ ಮತ್ತೆ ಬಂಧನ ಭೀತಿ

    ರಿಂಗಣಿಸತೊಡಗಿತು ಸೈನಿಕರ ಮೊಬೈಲ್…. ಸಿಯಾಚಿನ್ ಗ್ಲೇಸಿಯರ್​​​​​ನಲ್ಲಿ ಮೊದಲ ಮೊಬೈಲ್ ಟವರ್ ಸ್ಥಾಪನೆ; 4G ಇಂಟರ್ನೆಟ್ ಸೌಲಭ್ಯವೂ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts