More

    ರಾಷ್ಟ್ರ ಧ್ವಜದ ಬಗ್ಗೆ ನಕಲಿ ಪೋಸ್ಟ್​: ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್​ಗೆ ಮತ್ತೆ ಬಂಧನ ಭೀತಿ

    ತುಮಕೂರು: ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದ ಮಹಿಳಾ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್​ಗೆ ಇದೀಗ ಮತ್ತೆ ಬಂಧನ ಭೀತಿ ಎದುರಾಗಿದೆ.

    ಎಕ್ಸ್​​ ಖಾತೆಯಲ್ಲಿ ನಕಲಿ ಪೋಸ್ಟ್​ ಹಂಚಿಕೊಂಡ ಆರೋಪದ ಮೇಲೆ ತುಮಕೂರಿನ ಜಯನಗರ ಠಾಣಾ ಪೊಲೀಸರು ಸುಮೋಟೋ ಕೇಸ್​ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನ ಲುಲು ಶಾಪಿಂಗ್‌ ಮಾಲ್‌ನಲ್ಲಿ ಭಾರತದ ಬಾವುಟಕ್ಕಿಂತ ಪಾಕಿಸ್ತಾನ ಬಾವುಟವನ್ನು ಎತ್ತರದಲ್ಲಿ ಹಾರಿಸಿದ್ದಾರೆ ಎಂದು ಪೋಟೋ ಜೊತೆಗೆ ಶಕುಂತಲಾ ನಟರಾಜ್​ ಪೋಸ್ಟ್ ಹಂಚಿಕೊಂಡಿದ್ದಾರೆ.

    ಇದಿಷ್ಟೇ ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ ಟ್ಯಾಗ್​ ಮಾಡಿರುವ ಶಕುಂತಲಾ, ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ? ನಿಮ್ಮ ಮಾಲ್​ನವರಿಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಜತೆಗೆ ಬೆಂಗಳೂರಿನ ಲುಲು ಮಾಲ್​ ಬಹಿಷ್ಕರಿಸಿ ಎಂದು ಹ್ಯಾಷ್​ಟ್ಯಾಗ್​ ಉಪಯೋಗಿಸಿದ್ದಾರೆ. ಅ. 10ರಂದು ಪೋಸ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: ದಕ್ಷಿಣ ಕ್ಯಾಲಿಫೋರ್ನಿಯಾದ ವಾಣಿಜ್ಯ ಕಟ್ಟಡದಲ್ಲಿ ಅಮೋನಿಯಾ ಸೋರಿಕೆ; 11 ಜನರ ಸ್ಥಿತಿ ಗಂಭೀರ

    ಆದರೆ, ಶಕುಂತಲಾ ಪೋಸ್ಟ್​ ಎಷ್ಟು ಸತ್ಯ ಎಂಬುದನ್ನು ತಿಳಿದುಕೊಳ್ಳಲು ಅದರ ಮೂಲ ಹುಡುಕಿ ಫ್ಯಾಕ್ಟ್ ಚೆಕ್ ಮಾಡಿದ ಪೊಲೀಸರಿಗೆ ನಕಲಿ ಪೋಸ್ಟ್​ ಎಂಬುದು ಗೊತ್ತಾಗಿದೆ. ಪೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದು ಬೆಳಕಿಗೆ ಬಂದಿದೆ.

    ನಕಲಿ ಪೋಸ್ಟ್​ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆಂಬ ಆರೋಪದಡಿ ಶಕುಂತಲಾ ನಟರಾಜ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್​ 153 (ಬಿ) ಅಡಿಯಲ್ಲಿ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

    ಹಿಂದೆಯೂ ಬಂಧನವಾಗಿತ್ತು
    ಇತ್ತೀಚೆಗಷ್ಟೇ ಶಕುಂತಲಾ ನಟರಾಜ್​ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು. ಈ ಪ್ರಕರಣದಲ್ಲಿ ಆಕೆಯನ್ನು ಬಂಧಿಸಿ, ಜಾಮೀನನ ಮೇಲೆ ಬಿಡುಗಡೆ ಮಾಡಲಾಗಿದೆ.

    ಗಾಜಾ ಒಳಗೆ ನುಗ್ಗಿ ಕಾರ್ಯಾಚರಣೆ ಶುರು: ಇಸ್ರೇಲ್​ನಿಂದ ವಿನಾಶಕಾರಿ ಆಕ್ರಮಣದ ಸುಳಿವು,​ ಜೀವ ಭಯದಲ್ಲೇ ನಾಗರಿಕರ ಪಲಾಯನ

    ಇತಿಹಾಸ ಮರುಕಳಿಸಲಿದೆ ಎಂದ ಶೋಯೆಬ್​ ಅಖ್ತರ್​: ಭಾರತೀಯರ ಟ್ರೋಲ್​ಗೆ ಬೆದರಿ ಪೋಸ್ಟ್​ ಡಿಲೀಟ್​

    ಪ್ರಜ್ವಲ್ ದೇವರಾಜ್-ಶ್ರುತಿ ಹರಿಹರನ್​ ಸಿನಿಮಾದಲ್ಲಿ ತೆಲುಗು ನಟ ಸುನೀಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts