More

    ಎಸ್ಸೆಸ್ಸೆಲ್ಸಿ,ಚಿತ್ರದುರ್ಗಕ್ಕೆ 21ನೇ ಸ್ಥಾನ

    ಚಿತ್ರದುರ್ಗ: ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲೇ ನಂ.1ಸ್ಥಾನಗಳಿಸಿದ್ದ ಚಿತ್ರದುರ್ಗ ಜಿಲ್ಲೆ ಈ ಬಾರಿ 21ನೇ ಸ್ಥಾನಕ್ಕೆ ಕುಸಿದಿದೆ. ಮಾ.25ರಿಂದ ಏಪ್ರಿಲ್ 6ರವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ಜಿಲ್ಲೆಯ 490 ಪ್ರೌಢಶಾಲೆಗಳ 24228 ವಿದ್ಯಾರ್ಥಿಗಳು 78 ಕೇಂದ್ರಗಳಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ ಪರೀಕ್ಷೆ ಬರೆದಿದ್ದ 22275 ವಿದ್ಯಾರ್ಥಿಗಳ ಪೈಕಿ 16227 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ಈ ಬಾರಿ ಜಿಲ್ಲೆಗೆ ಶೇ.72.85 ಫಲಿತಾಂಶ ಬಂದಿದೆ.
    2021-22ರಲ್ಲಿ 23095 ವಿದ್ಯಾರ್ಥಿಗಳ ಪೈಕಿ 21780 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಗೆ ಶೇ.94.3 ಹಾಗೂ 2022-23ರಲ್ಲಿ 21995 ವಿದ್ಯಾರ್ಥಿಗಳಲ್ಲಿ 21300 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.96.8 ಫಲಿತಾಂಶದೊಂದಿಗೆ ಜಿಲ್ಲೆ ನಂ.1 ಸ್ಥಾನ ಪಡೆಯುವಂತಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts