More

    VIDEO: ಲಾಕ್​ಡೌನ್ ನಂತರ ಮುಂದೇನು?: ಆರೆಸ್ಸೆಸ್​ ನೀತಿ ನಿಲುವು ಹೀಗಿದೆ ನೋಡಿ…

    ನವದೆಹಲಿ: ಲಾಕ್​ಡೌನ್3 ಈಗ ಚಾಲ್ತಿಯಲ್ಲಿದ್ದು, ಮೇ 17ಕ್ಕೆ ಇದು ಕೊನೆಗೊಳ್ಳಲಿದೆ. ನಂತರ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುವಾಗಲೇ ದೇಶದ ಅತಿದೊಡ್ಡ ಸಾಮಾಜಿಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಮುಂದೆ ಅನುಸರಿಸಬೇಕಾದ ನೀತಿಯ ಕುರಿತ ತನ್ನ ನಿಲುವನ್ನು ಪ್ರಕಟಿಸಿದೆ.

    ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಅನುಸರಿಸಬೇಕಾದ ನಿಲುವಿನಲ್ಲಿ ಆರ್ಥಿಕ ಸ್ವಾವಲಂಬನೆಯ ಸ್ವದೇಶಿ ಮಾದರಿಗೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೆ COVID19 ಹುಟ್ಟಿನ ವಿಚಾರ ವಿಸ್ತೃತವಾಗಿ ತನಿಖೆಯಾಗಬೇಕು. ಈ ಸಾಂಕ್ರಾಮಿಕ ರೋಗ ತಡೆಯುವ ಲಾಕ್​ಡೌನ್ ನಂತರದಲ್ಲಿ ಸರ್ಕಾರವೂ ಇದೇ ಧ್ಯೇಯೋದ್ದೇಶಗಳನ್ನು ಮನದಲ್ಲಿರಿಸಿಕೊಂಡು ಕಾರ್ಯಪ್ರವೃತ್ತವಾಗಬೇಕು ಎಂದು ಆರ್​ಎಸ್​ಎಸ್​ ಬಯಸಿದೆ.

    ಇದನ್ನೂ ಓದಿ: ‘ರಾಹುಲ್​ ಗಾಂಧಿ ಹೇಳಿದ್ದು ಸರಿಯಾಗಿದೆ’ ಎಂದ ಆರೋಗ್ಯ ಸೇತು ಹ್ಯಾಕರ್​…

    ಆರ್​ಎಸ್​ಎಸ್​ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಬುಧವಾರ ವಿದೇಶಿ ಮಾಧ್ಯಮ ಸಂಸ್ಥೆ ಪ್ರತಿನಿಧಿಗಳ ಜತೆಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂವಾದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಈ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್​ನ ಹುಟ್ಟು ಮತ್ತು ಪ್ರಸರಣದ ವಿಷಯ ಹಾಗೂ ಅದರ ಹಿಂದಿನ ಕಾರಣ ಮತ್ತು ಪರಿಣಾಮಗಳ ಕುರಿತು ಒಂದು ವಿಸ್ತೃತ ತನಿಖೆ ಆಗಬೇಕಾದ್ದು ಅವಶ್ಯ. ಇಂಥ ತುರ್ತು ಸಂದರ್ಭದಲ್ಲಿ ಇಡೀ ಜಗತ್ತು ಒಂದಾಗಿ ಕೆಲಸ ಮಾಡುವುದಕ್ಕೆ ಈ ತನಿಖೆಯ ಫಲಿತಾಂಶ ನೆರವಾಗಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಭಾರಿ ಪ್ರಮಾಣದ ಲಿಕ್ಕರ್ ಮಿಸ್ಸಿಂಗ್​; ಪೊಲೀಸರ ಮೇಲೆಯೇ ಡೌಟ್​!

    ಇನ್ನು ಕೋವಿಡ್​ 19ರ ನಂತರದ ಆರ್ಥಿಕತೆ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ ಸ್ವದೇಶಿ ಆರ್ಥಿಕ ಮಾದರಿಯನ್ನು ಅಭಿವೃದ್ಧಿ ಪಡಿಸಲಿದೆ. ಅದು ಕೇಂದ್ರ ಬಿಂದು ಸ್ವದೇಶಿ ಆಗಿರಲಿದ್ದು, ಸ್ಥಳೀಯ ಸಂಪನ್ಮೂಲ ಮತ್ತು ಕಾರ್ಮಿಕ ವರ್ಗವನ್ನು ಬಳಸಿಕೊಂಡು ದೇಶವನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು. ಜಗತ್ತನ್ನು ಭೋಗ ದೃಷ್ಟಿಕೋನ ಆವರಿಸಿಕೊಂಡಿದ್ದು, ಅದುವೇ ಈಗ ನಮ್ಮನ್ನು ಈ ಆರ್ಥಿಕ ಹಿಂಜರಿತಕ್ಕೆ ತಳ್ಳಿದೆ. ಅಲ್ಲದೆ, ಪರಿಸರವನ್ನೂ ಹಾನಿಗೀಡುಮಾಡಿದೆ. ಇಂಥ ಸನ್ನಿವೇಶದಲ್ಲಿ ಸ್ವಾವಲಂಬಿ ಆರ್ಥಿಕತೆ ಅನಿವಾರ್ಯವಾಗಲಿದೆ. ನಾವು ನಮ್ಮ ಜೀವನ ಶೈಲಿಯನ್ನು ಭೋಗದ ಶೈಲಿಯಿಂದ ಪ್ರಕೃತಿ ಸ್ನೇಹಿ ಶೈಲಿಗೆ ಮಾರ್ಪಡಿಸಿಕೊಳ್ಳಬೇಕಾಗಿದೆ ಎಂದರು.

    ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts