More

    ಭಾರಿ ಪ್ರಮಾಣದ ಲಿಕ್ಕರ್ ಮಿಸ್ಸಿಂಗ್​; ಪೊಲೀಸರ ಮೇಲೆಯೇ ಡೌಟ್​!

    ಚಂಡೀಗಢ: ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಕುರಿತು ತೀರ್ಮಾನ ತೆಗೆದುಕೊಳ್ಳುವ ವಿಚಾರದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯುವುದಕ್ಕೆ ಕೆಲವೇ ಗಂಟೆಗಳ ಮೊದಲು ಗೋಡೌನ್​ ಒಂದರಿಂದ ಭಾರಿ ಪ್ರಮಾಣದ ಮದ್ಯ ನಾಪತ್ತೆಯಾಗಿದೆ. ಇದು ಹರಿಯಾಣದಲ್ಲಿ ಮಂಗಳವಾರ ನಡೆದ ಘಟನೆ!

    ಭಾರತದಲ್ಲೇ ನಿರ್ಮಿಸಿರುವ ವಿದೇಶಿ ಮದ್ಯ (ಐಎಂಎಫ್​ಎಲ್​) ಇದಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ. ಹರಿಯಾಣದ ಸೋನಿಪತ್ ಜಿಲ್ಲೆಯ ಖಾರ್​ಖೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಮದ್ಯ ನಾಪತ್ತೆ ಪ್ರಕರಣ ನಡೆದಿದೆ. ಇದರಲ್ಲಿ ಪೊಲೀಸ್​ ಠಾಣೆಯಲ್ಲಿನ ಹಾಲಿ ಮತ್ತು ಮಾಜಿ ಸ್ಟೇಷನ್ ಹೌಸ್​ ಆಫೀಸರ್​, ಅಬಕಾರಿ ಅಧಿಕಾರಿಗಳು ಹಾಗೂ ಇನ್ನೂ ಕೆಲವು ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಅದೇ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ !

    ಇದನ್ನೂ ಓದಿ: ರಾಜ್ಯ ಪೊಲೀಸ್​ ಇಲಾಖೆಯಲ್ಲಿ 2,672 ಕಾನ್​ಸ್ಟೆಬಲ್​, 162 ಎಸ್​ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಮೂಲಗಳು ಹೇಳುವ ಪ್ರಕಾರ, ಖಾರ್​ಖೋಡದ ಹಾಲಿ ಎಸ್​ಎಚ್​ಒ ಮತ್ತು ಆತನ ನಿಕಟ ಪೂರ್ವ ಅಧಿಕಾರಿ ಈ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪಗಳು ವ್ಯಕ್ತವಾಗಿದೆ. ಹರಿಯಾಣದ ಗೃಹ ಸಚಿವ ಅನಿಲ್ ವಿಜ್​ ಅವರ ನಿರ್ದೇಶಾನುಸಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಶನ್​ದೀಪ್ ರಾಂಧವ ಕೂಡಲೇ ಎಸ್​ಎಚ್​​ಒಗಳನ್ನು ಅಮಾನತುಗೊಳಿಸಿ ತನಿಖೆ ಆರಂಭಿಸಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಡಿಜಿಪಿ ಸಂದೀಪ್​ ಖಿರ್ವಾರ್​, ಸೋನಿಪತ್​​ನ ಎಸ್​ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್​ಐಟಿ)ವನ್ನು ರಚಿಸಿದ್ದು, ಪೊಲೀಸರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಹಗರಣದಲ್ಲಿ ಸ್ಥಳೀಯರು, ಇತರೆ ಇಲಾಖೆ ಅಧಿಕಾರಿಗಳು ಕೂಡ ಭಾಗಿಯಾಗಿರುವ ಸಂದೇಹವಿದೆ. ಪ್ರಾಥಮಿಕ ತನಿಖೆಯ ಮಾಹಿತಿ ಆಧರಿಸಿ ನಾವು ಆರೋಪಿಗಳನ್ನು ಗುರುತಿಸಿ ಅವರ ವಿರುದ್ಧ ಆರೋಪ ಹೊರಿಸಿ ಚಾರ್ಜ್​ಶೀಟ್ ದಾಖಲಿಸುತ್ತೇವೆ ಎಂದಿದ್ದಾರೆ.

    ಇದನ್ನೂ ಓದಿ: ಮದ್ಯಪ್ರಿಯರಿಗೆ ಶಾಕಿಂಗ್​ ನ್ಯೂಸ್​: ಕುಡುಕರ ಆಸೆ ಈಡೇರಿಸಿ ಜೇಬಿಗೆ ಕತ್ತರಿ ಹಾಕಿದ ಸರ್ಕಾರ

    ಲಾಕ್​ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಕಾರಣ ಅಬಕಾರಿ ಅಧಿಕಾರಿಗಳು ರಾಜ್ಯಾದ್ಯಂತ ದಾಳಿ ನಡೆಸಿದ್ದರು. ಒಟ್ಟು 47 ಗೋಡೌನ್​​ಗಳಿಗೆ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದರು. ಇದರಂತೆ, ಸೋನಿಪತ್​ ಜಿಲ್ಲೆಯಲ್ಲೂ ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ ಖಾರ್​ಖೋಡದ ಗೋಡೌನ್​ನಲ್ಲಿ ವಶಪಡಿಸಿದ ಮದ್ಯದ ದಾಸ್ತಾನಿನಲ್ಲಿ ಭಾರಿ ಪ್ರಮಾಣದ ಮದ್ಯ ಬೇರೆಡೆ ಸಾಗಿಸಲಾಗಿದೆ ಎಂಬುದು ಆರೋಪ. (ಏಜೆನ್ಸೀಸ್​)

    ಮದ್ಯ ದುಬಾರಿ, ಖರೀದಿಗಿಲ್ಲ ವರಿ! 90 ಎಂಎಲ್​ಗೆ 85 ಪೈಸೆ ಏರಿಕೆ, ತುಟ್ಟಿಯಾದರೂ ತಗ್ಗದ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts