ವಿಡಿಯೋ ಕಾಲ್​ ರಿಸೀವ್​ ಮಾಡಿ ಹನಿಟ್ರ್ಯಾಪ್​ಗೆ ಬಿದ್ದ ಮಾಜಿ ಶಾಸಕನ ಪುತ್ರನಿಗೆ ಸಂಕಷ್ಟ!

honeytrap
Published on

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಸೆಕ್ಸ್ ಸಿಡಿ ಪ್ರಕರಣ ತಲ್ಲಣಗೊಳಿಸಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕರೊಬ್ಬರ ಮಗನೂ ಹನಿಟ್ರ್ಯಾಪ್‌ನಲ್ಲಿ ಸಿಲುಕಿ ಪರದಾಡಿರುವ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಧಾರವಾಡ ಜಿಲ್ಲೆಯ ಮಾಜಿ ಶಾಸಕ ಕೋನರೆಡ್ಡಿ ಪುತ್ರ ನವೀನ್​ಗೆ ಫೇಸ್​ಬುಕ್​ನಲ್ಲಿ ಪರಿಚಯವಾದ ಯುವತಿಯೊಬ್ಬಳು ವಿಡಿಯೋ ಕಾಲ್ ಮಾಡಿ ಸಲುಗೆ ಬೆಳೆಸಿಕೊಂಡಿದ್ದಾಳೆ. ಬಳಿಕ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಿಂಸೆ ನೀಡಿದ್ದಾಳೆ. ಹಣಕ್ಕಾಗಿ ಕಾಟ ಕೊಟ್ಟ ಯುವತಿ ವಿರುದ್ಧ ನವೀನ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿರಿ ಸಿಡಿ ಕೇಸ್​: ಪೊಲೀಸರ ಮುಂದೆ ಬಿಕ್ಕಿಬಿಕ್ಕಿ ಅಳುತ್ತಲೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯುವತಿಯ ಪ್ರಿಯಕರ!

ವಿಡಿಯೋ ಕಾಲ್ ಮಾಡಿ ಸಲುಗೆಯಿಂದ ಇರುತ್ತಿದ್ದ ಯುವತಿ ಬಳಿಕ ಮಾಜಿ ಶಾಸಕರ ಮಗನ ಫೋಟೋ ಎಡಿಟ್‌ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಹಣಕ್ಕಾಗಿ ಪೀಡಿಸಿದ್ದಾಳೆ. ಬೆದರಿಕೆ ಬಳಿಕ ಫೋನ್ ಪೇ ಮೂಲಕ ನವೀನ್​ ಹಣ ಕಳಿಸಿದ್ದಾರೆ. ಪದೆಪದೇ ಹಣಕ್ಕೆ ಬೇಡಿಕೆ ಇಟ್ಟಾಗ ಸೈಬರ್ ಕ್ರೈಂಗೆ ಮಾಜಿ ಶಾಸಕನ ಪುತ್ರ ದೂರು ನೀಡಿದ್ದಾರೆ.

ಅಪರಿಚಿತ ಯುವತಿ ವಿರುದ್ಧ ನವೀನ್ ಹೆಸರಿನಲ್ಲಿ ಎಫ್​ಐಆರ್​ ದಾಖಲಾಗಿದೆ. ಅವಳಿ ನಗರದಲ್ಲಿ ಆನ್​ಲೈನ್​ವಂಚಕರ ಜಾಲ ಬೀಡುಬಿಟ್ಟಿದೆ. ಈಗಾಗಲೇ ಏಳೆಂಟು ಜನರಿಗೆ ಮೋಸ‌ ಮಾಡಿ ಹಣ ಪೀಕಿದ್ದಾರೆ. ಗುಜರಾತ್ ಮೂಲದ ವಂಚಕ ತಂಡದ ಬಲೆಗೆ ಬಿದ್ದು ಜನರು ಹಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net