

ಮಂಗಳೂರು: ನಗರ ಹೊರವಲಯದ ತಲಪಾಡಿ ಬಳಿ ಘಟನೆ ಇಂದು ಬೆಳಗ್ಗೆ ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಬೆಚ್ಚಿಬೀಳಿಸುತ್ತದೆ.
ತಲಪಾಡಿಯಲ್ಲಿ ಟಯರ್ ಅಂಗಡಿ ಇಟ್ಟುಕೊಂಡಿದ್ದ ಉದ್ಯಾವರ ಮಾಡ ನಿವಾಸಿ ತುಳಸಿ ಅವರು ಸ್ಕೂಟರ್ನಲ್ಲಿ ಬರುತ್ತಿದ್ದರು. ತಲಪಾಡಿಯಲ್ಲಿ ರಸ್ತೆ ದಾಟಲು ತಿರುವಿನಲ್ಲಿ ಸ್ಕೂಟರ್ ಹೋಗುತ್ತಿದ್ದಂತೆ ಮಂಗಳೂರಿನಿಂದ ಕಾಸರಗೋಡು ಮಾರ್ಗವಾಗಿ ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇದನ್ನೂ ಓದಿರಿ ಚಲಿಸುತ್ತಿದ್ದ ಕಾರಿನ ಮೇಲೆ ಜಲ್ಲಿ ತುಂಬಿದ್ದ ಲಾರಿ ಬಿದ್ದು ಸ್ಥಳದಲ್ಲೇ ಇಬ್ಬರ ಸಾವು
ರಸ್ತೆ ಡಿವೈಡರ್ ಮೇಲೆಯೇ ಸ್ಕೂಟರ್ ಸಮೇತ ಬಸ್ ಸ್ವಲ್ಪ ಮುಂದಕ್ಕೆ ಹೋಗಿದೆ. ಸ್ಕೂಟರ್ ಬಸ್ಸಿನಡಿ ಸಿಲುಕಿತ್ತು. ಘಟನೆಯಲ್ಲಿ ಸ್ಕೂಟರ್ ಸವಾರ ತುಳಸಿ (35) ಗಾಯಗೊಂಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.