ಸಿಇಟಿ ಫಲಿತಾಂಶ: ಪ್ರಕಟಣೆ ದಿನಾಂಕದ ಕುರಿತು ಇಲ್ಲಿದೆ ಮಾಹಿತಿ…

KEA
Published on

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು ನಡೆಸಿದ್ದ ಸಿಇಟಿ ಫಲಿತಾಂಶವು ಜೂನ್ 12 ಅಥವಾ 14ರಂದು ಪ್ರಕಟವಾಗುವ ಸಾಧ್ಯತೆಗಳಿವೆ.

ಈ ಬಾರಿಯ ಸಿಇಟಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಪ್ರಸ್ತುತ ಸಿಇಟಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಎರಡನ್ನೂ ಆಧರಿಸಿ ರ‌್ಯಾಂಕ್ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ರ‌್ಯಾಂಕ್ ಪಟ್ಟಿ ಬಹುತೇಕ ಸಿದ್ಧವಾಗಲಿದೆ.

ಈ ತಾಂತ್ರಿಕ ಕೆಲಸಗಳು ಮುಗಿದ ಬಳಿಕ ಜೂ.12 ಅಥವಾ 14ರಂದು ಫಲಿತಾಂಶ ಪ್ರಕಟಿಸಲು ಚರ್ಚೆ ನಡೆದಿದೆ. ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ದಿನಾಂಕವನ್ನು ಶೀಘ್ರ ಅಂತಿಮಗೊಳಿಸುವುದಾಗಿ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಮಾಹಿತಿ ನೀಡಿದ್ದಾರೆ. ಕಳೆದ ಮೇ 20ರಿಂದ 22ರವರೆಗೆ ನಡೆದಿದ್ದ ಸಿಇಟಿ-2023ಕ್ಕೆ 2.39 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net