ಗ್ರಾಪಂ ಚುನಾವಣೆ ದ್ವೇಷಕ್ಕೆ ಬಲಿಯಾಯ್ತು ಅಡಕೆ ತೋಟ!

gp fire
Published on

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯ ಜಿದ್ದಾಜಿದ್ದಿನ ಪೈಪೋಟಿ, ಸೋಲು-ಗೆಲುವು ಸಹಜ. ಆದರೆ, ಸೋಲಿಂದ ಕಂಗೆಟ್ಟ ಕೆಲವರು ಮಾಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ.

ರಾಜಕೀಯ ದ್ವೇಷಕ್ಕೆ ದೇವದುರ್ಗ ತಾಲೂಕಿನ ಹೊನ್ನಕಾಟಮಳ್ಳಿ ಗ್ರಾಮದಲ್ಲಿ ರೈತರೊಬ್ಬರ 2 ಎಕರೆ ಜಮೀನಿನಲ್ಲಿ ಕೊಯ್ಲಿಗೆ ಬಂದಿದ್ದ ಬ್ಯಾಡಗಿ ಮೆಣಸಿನಕಾಯಿಯನ್ನು ಕಿಡಿಗೇಡಿಗಳು ನಾಶ ಮಾಡಿ ವಿಕೃತಿ ಮೆರೆದಿದ್ದರು. ಇದೀಗ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ನೆಟ್ಟೆಗೆರೆ ಗೇಟ್​ನಲ್ಲಿ 250ಕ್ಕೂ ಹೆಚ್ಚು ಅಡಕೆ ಗಿಡಗಳಿಗೆ ಬೆಂಕಿ ಹಚ್ಚಿದ್ದಾರೆ! ಇದನ್ನೂ ಓದಿರಿ ಗ್ರಾಪಂ ಚುನಾವಣೆ ಸೋಲಿಂದ ಕಂಗೆಟ್ಟವ ರಾತ್ರೋರಾತ್ರಿ ರಸ್ತೆಯನ್ನೇ ಬಂದ್​ ಮಾಡಿದ!

ನೆಟ್ಟೆಗೆರೆ ಗೇಟ್ ನಿವಾಸಿ ಮಾಯಣ್ಣಗೌಡ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿದ್ದರು. ಇದೇ ಕಾರಣಕ್ಕೆ ಕೆಲ ದುಷ್ಕರ್ಮಿಗಳು ಮಾಯಣ್ಣಗೌಡರ ಅಡಕೆ ತೋಟಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ.

ಅಡಕೆ ಗಿಡ, ಹನಿ ನೀರಾವರಿ ಪೈಪ್​ಗಳು, ಪಂಪು ಮೋಟಾರ್ ಸುಟ್ಟಿದ್ದು, 10 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net