ಜೂಜಾಟದ ವೇಳೆ ಜಗಳ, 2 ಗುಂಪುಗಳ ಮಧ್ಯೆ ಮಾರಾಮಾರಿ; ಸ್ವಾಮೀಜಿಯಿಂದ ಸಂಧಾನ

Feature
Published on

ವಿಜಯನಗರ: ಜೂಜಾಟದ ವೇಳೆ ಉಂಟಾದ ಜಗಳ ವಿಕೋಪಕ್ಕೆ ತೆರಳಿ ಎರಡು ಗುಂಪುಗಳ ನಡುವೆ ಮಾರಾಮಾರಿ ಸಂಭವಿಸಿದ್ದು, ಕೊನೆಗೆ ಸ್ವಾಮೀಜಿಯೊಬ್ಬರ ಮಧ್ಯಪ್ರವೇಶದಿಂದ ಸಂಧಾನ ನಡೆದಿದೆ. ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದೆ.

ನಾಗರ ಪಂಚಮಿ ಹಬ್ಬದ ಸಂದರ್ಭ ನಡೆದ ಜೂಜಾಟದ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಎರಡೂ ಗುಂಪಿನವರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು.

ಆಗ ಉದ್ರಿಕ್ತಗೊಂಡ ಎರಡೂ ಗುಂಪಿನ ಸದಸ್ಯರ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ-ಕಲ್ಲುಗಳಿಂದ ಹೊಡೆದಾಡಿಕೊಂಡ ಇವರು ಮಹಿಳೆಯರು ಎಂಬುವುದನ್ನೂ ಲೆಕ್ಕಿಸದೆ ಬಡಿದಾಡಿಕೊಂಡಿದ್ದಾರೆ.

ಸ್ಥಳಕ್ಕೆ ಹರಪ್ಪನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ನಂತರ ಸ್ಥಳೀಯ ಸ್ವಾಮೀಜಿಯೊಬ್ಬರು ಸಂಧಾನ ನಡೆಸಿದರು. ಎರಡೂ ಗುಂಪಿನ ಮುಖಂಡರ ಜತೆ ಮಾತನಾಡಿದ ಸ್ವಾಮೀಜಿ, ಎರಡೂ ಕಡೆಯವರನ್ನು ರಾಜಿ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net