ಪ್ರಾಂಶುಪಾಲರ ಉಪಟಳ ಸಹಿಸಲಾಗುತ್ತಿಲ್ಲ ಎಂದು ಶಾಸಕರ ಕಾಲಿಗೆ ಬಿದ್ದ ಉಪನ್ಯಾಸಕ!

Mla
Published on

ಮಂಡ್ಯ: ಪ್ರಾಂಶುಪಾಲರ ಉಪಟಳ ಸಹಿಸಲಾರದೆ ತಮ್ಮನ್ನು ಪಾರು ಮಾಡಿ ಎಂದು ಉಪನ್ಯಾಸಕರೊಬ್ಬರು ಶಾಸಕರ ಕಾಲಿಗೆ ಬಿದ್ದು ಬೇಡಿಕೊಂಡ ಘಟನೆಯೊಂದು ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

ಇಲ್ಲಿನ ಉಪನ್ಯಾಸಕ ವಿ.ಕೆ. ಶಿವಾನಂದ ಎಂಬವರು ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಅವರ ಕಾಲಿಗೆ ಬಿದ್ದಿದ್ದಾರೆ. ಶಾಸಕರು ಕಾಲೇಜಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕಾಲೇಜಿನ ಪ್ರಾಂಶುಪಾಲ ಪಾಪಯ್ಯ ಅವರು ಜಾತೀಯತೆ ತೋರುತ್ತಿದ್ದಾರೆ. ಚಿಕ್ಕಪುಟ್ಟ ವಿಷಯಗಳಿಗೂ ಅಟ್ರಾಸಿಟಿ ಕೇಸು ದಾಖಲಿಸುತ್ತಿದ್ದಾರೆ. ನಾವು ಪೊಲೀಸ್ ಠಾಣೆಗೆ ಅಲೆದು ಸುಸ್ತಾಗಿದ್ದೇವೆ, ಇದರಿಂದ ನಮ್ಮನ್ನು ಹೇಗಾದರೂ ಪಾರು ಮಾಡಿ ಎಂದು ಶಾಸಕರ ಕಾಲಿಗೆ ಬಿದ್ದು ಉಪನ್ಯಾಸಕರು ಬೇಡಿಕೊಂಡಿದ್ದಾರೆ.

ಉಪನ್ಯಾಸಕರನ್ನು ಸಂತೈಸಿದ ಶಾಸಕ ಡಿ.ಸಿ.ತಮ್ಮಣ್ಣ, ಶಿಕ್ಷಣಕ್ಕೆ ತೊಂದರೆ ಕೊಡುವವರನ್ನು ಹೊರಗೆ ಹಾಕುತ್ತೇನೆ. ಅವರಿಂದ ನನಗೇನೂ ಲಕ್ಷಾಂತರ ವೋಟು ಬರಬೇಕಾಗಿಲ್ಲ. ನನಗೆ ಅಧಿಕಾರ ಮುಖ್ಯವಲ್ಲ. ಸಂಸ್ಥೆಗೆ ತೊಂದರೆ ಕೊಡುವವರನ್ನು ಹೊರಗೆ ಕಳುಹಿಸುತ್ತೇನೆ ಎಂದರು. ಅಲ್ಲದೆ ಸಮಸ್ಯೆ ಸರಿಯಾಗಿ ಹೇಳಬೇಕಲ್ವಾ ಎಂದು ಉಪನ್ಯಾಸಕರಿಗೆ ಶಾಸಕರು ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net