More

    ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

    ಬೆಂಗಳೂರು: ಶ್ರಾವಣ ಬಂತು ಎಂದು ಸಂಭ್ರಮದಲ್ಲಿದ್ದ ಜನರಿಗೆ ಈಗ ಆ ಎಲ್ಲ ಖುಷಿಯನ್ನು ಕಸಿಯುವಂಥ ಆದೇಶವೊಂದು ಸರ್ಕಾರದಿಂದ ಹೊರಬಿದ್ದಿದೆ. ಗಣೇಶ ಚೌತಿ, ಶ್ರೀಕೃಷ್ಣ ಜನ್ಮಾಷ್ಟಮಿ, ದುರ್ಗಾ ಪೂಜೆ, ಮೊಹರಂ ಸೇರಿ ಆಗಸ್ಟ್​-ಅಕ್ಟೋಬರ್ ಅವಧಿಯಲ್ಲಿ ಆಚರಿಸುವ ಎಲ್ಲ ಹಬ್ಬಗಳಿಗೂ ಸರ್ಕಾರ ನಿರ್ಬಂಧ ವಿಧಿಸಿದೆ. ಕರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಬಂಧ ಹೇರಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಗಣೇಶ ಚತುರ್ಥಿಗೆ ಸಾರ್ವಜನಿಕ ಸ್ಥಳಗಳಲ್ಲಿ, ಚಪ್ಪರ/ಪೆಂಡಾಲ್/ಶಾಮಿಯಾನ ವೇದಿಕೆಗಳಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ ಎಂದು ಆದೇಶಿಸಿರುವ ಸರ್ಕಾರ ಮನೆ ಹಾಗೂ ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಹಬ್ಬ ಆಚರಿಸುವಂತೆ ಆದೇಶಿಸಿದೆ. ಮಾತ್ರವಲ್ಲದೆ ಗಣೇಶ ಮೂರ್ತಿಯನ್ನು ತರುವಾಗ ಹಾಗೂ ವಿಸರ್ಜನೆಗೆ ಕೊಂಡೊಯ್ಯುವಾಗ ಮೆರವಣಿಗೆ/ಮನರಂಜನಾ ಕಾರ್ಯಕ್ರಮ ಆಯೋಜಿಸದಂತೆಯೂ ಆದೇಶ ಮಾಡಿದೆ.

    ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮೊಹರಂ ಪ್ರಾರ್ಥನಾ ಸಭೆಯನ್ನು ನಿಷೇಧಿಸಿರುವ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಪಂಜಾ, ಆಲಂ, ತಾಜಿಯತ್ ಸ್ಥಾಪಿಸುವುದಕ್ಕೂ ನಿರ್ಬಂಧ ಹೇರಿದೆ. ಖಬರಸ್ತಾನ್ ಸೇರಿದಂತೆ ಯಾವುದೇ ಖಾಲಿ ಜಾಗಗಳಲ್ಲಿ ಮೊಹರಂ ಸಂಬಂಧಿತ ಆಚರಣೆಗೆ ನಿಷೇಧ ಹೇರಿರುವ ಸರ್ಕಾರ, 60 ವರ್ಷಕ್ಕೆ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ನಡೆಸಬೇಕು ಎಂದೂ ಸೂಚಿಸಿದೆ.

    ಸರ್ಕಾರ ವಿಧಿಸಿರುವ ನಿರ್ಬಂಧಗಳ ಸಂಪೂರ್ಣ ವಿವರ ಇಲ್ಲಿದೆ..

    ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

    ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

    ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ
    ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts