ಮೇ 13ರಿಂದ ಶಿಶಿಲೇಶ್ವರನ ಜಾತ್ರೆ, ಅಂಗಣೋತ್ಸವ, ಬೆಳ್ಳಿಕಟ್ಟೆ ಪೂಜೆ, ದೈವಗಳ ನೇಮ

temple
Published on

ಕೊಕ್ಕಡ: ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಜರುಗಲಿರುವುದು.

ಮೇ 13ರ ರಾತ್ರಿ ವಾಸ್ತು ಬಲಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಪೂಜೆ, ಕಿಲಮರಿತ್ತಾಯ ನೇಮ, ಧ್ವಜಾರೋಹಣ ನಡೆಯಲಿದೆ. 14ರಂದು ಪೂರ್ವಾಹ್ನ ಪುಣ್ಯಾಹ, ಶಾಂತಿ ಹವನಗಳು, 12 ಕಾಯಿ ಗಣಯಾಗ, ರಾತ್ರಿ ಜೋಡು ನೇಮ, ಕುದುರೆಮುಖ ದೈವದ ನೇಮ, ಉಗ್ರಾಣ ತುಂಬಿಸುವುದು, ಅಂಕುರಾರ್ಪಣೆ, ದೇವರ ಉತ್ಸವ ಪ್ರಾರಂಭ, ಅಶ್ವತ್ಥಕಟ್ಟೆ ಪೂಜೆ ಜರುಗಲಿದೆ.

15ರಂದು ಪೂರ್ವಾಹ್ನ ಅಂಗಣೋತ್ಸವ ರಾತ್ರಿ ದೇವರ ಉತ್ಸವ, ಬೆಳ್ಳಿಕಟ್ಟೆ ಪೂಜೆ ನಡೆಯಲಿದೆ. 16ಕ್ಕೆ ಪೂರ್ವಾಹ್ನ ಅಂಗಣೋತ್ಸವ ರಾತ್ರಿ ಉತ್ಸವ, ಸವಾರಿ ಮಂಟಪ ಕಟ್ಟೆ ಪೂಜೆ, 17ಕ್ಕೆ ಪೂರ್ವಾಹ್ನ ಅಂಗಣೋತ್ಸವ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ರಾತ್ರಿ ಅಂಗಣೋತ್ಸವ, ಸರ್ಪ ದೋಷ, ಬಂಗರಕಟ್ಟೆ ಪೂಜೆ ರಾತ್ರಿ 11ರಿಂದ ಬೆಳಗಿನ ತನಕ ತುಳು ಯಕ್ಷಗಾನ, ಸರ್ಪದೋಷ ಕಾರ್ಯಗಳು ನಡೆಯಲಿವೆ.

18ರಂದು ಪೂರ್ವಾಹ್ನ ಅಂಗಣೋತ್ಸವ ರಾತ್ರಿ ಮಹಾ ರಥೋತ್ಸವ, ಕವಾಟ ಬಂಧನ, 19ಕ್ಕೆ ಪೂರ್ವಾಹ್ನ ಕವಾಟೋದ್ಘಾಟನೆ, ಮಹಾಪೂಜೆ ಸಂಜೆ ತೆಪ್ಪೋತ್ಸವ, ಕಟ್ಟೆಪೂಜೆ, ವಸಂತ ಕಟ್ಟೆಯಲ್ಲಿ ಓಕುಳಿ, ಮೀನಗುಂಡಿಯಲ್ಲಿ ಅವಭೃತೋತ್ಸವ, ಧ್ವಜಾವರೋಹಣ ಜರುಗಲಿದೆ. 20ಕ್ಕೆ ಪೂರ್ವಾಹ್ನ ಶ್ರೀ ಶಿಶಿಲೇಶ್ವರ ದೇವರ ಮೂಲಸ್ಥಾನ ಕುಮಾರಗುಡ್ಡೆಯಲ್ಲಿ ರುದ್ರಾಭಿಷೇಕ, ಮಹಾಪೂಜೆ, ಕುಮಾರಾದಿ ದೈವಗಳಿಗೆ ನೇಮ, ರಾತ್ರಿ ಗೋಪುರದ ಬಾಗಿಲಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ನೇಮ, ವರ್ಷಾವಧಿ ಕಟ್ಟೆಯ ಬಳಿ ದೈವಗಳ ನೇಮ, 21ರಂದು ಪೂರ್ವಾಹ್ನ ಶುದ್ಧ ಕಲಶ ಸಂಪ್ರೋಕ್ಷಣೆ, ಮಹಾಪೂಜೆ, ಬಳಿಕ ಪ್ರಸಾದ ವಿತರಣೆ ನಡೆಯಲಿದೆ.

14ರಿಂದ 21ರವರೆಗೆ ಪ್ರತಿದಿನ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಳದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net