ಇದು ದುರ್ಬಳಕೆಯೋ ಸದ್ಬಳಕೆಯೋ?!: ಬಸ್​ ನಿಲ್ದಾಣದಲ್ಲಿ ಈ ರೈತ ಮಾಡಿದ ಕೆಲಸ ಎಂಥದ್ದು ನೋಡಿ!

Untitled-1
Published on

ಹಾವೇರಿ: ಲಾಕ್​ಡೌನ್​ ಸಮಯದಲ್ಲಿ ಬಸ್​ ನಿಲ್ದಾಣವೊಂದರಲ್ಲಿ ರೈತರೊಬ್ಬರು ಮಾಡಿರುವ ಕೆಲಸ ಇದೀಗ ಎಲ್ಲೆಡೆ ಗಮನ ಸೆಳೆಯಲಾರಂಭಿಸಿದೆ. ಮಾತ್ರವಲ್ಲ ಇದು ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಇದನ್ನು ಕೆಲವರು ತಪ್ಪು ಎಂದು ಹೇಳಿದರೆ, ಇದರಲ್ಲೇನು ತಪ್ಪು ಎಂಬುದು ಈ ರೈತರ ಪ್ರಶ್ನೆ!

ಬಿಕೋ ಎನ್ನುತ್ತಿರುವ ರಸ್ತೆಯಲ್ಲಿರುವ ಈ ಬಸ್​ ನಿಲ್ದಾಣ ರೈತರೊಬ್ಬರಿಂದಾಗಿ ಗಮನ ಸೆಳೆಯುವಂತಾಗಿದೆ. ಅಂದಹಾಗೆ ಈ ಬಸ್​ ನಿಲ್ದಾಣ ಇರುವುದು ಹಾವೇರಿ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ. ಕಳೆದ ಕೆಲವು ದಿನಗಳ ಹಿಂದೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಸ್​ ಬರದೆ ತಂಗುದಾಣ ಖಾಲಿ ಉಳಿದಿದ್ದು ಒಂದೆಡೆಯಾದರೆ, ಈಗ ಕೆಲವು ದಿನಗಳಿಂದ ಕರ್ಫ್ಯೂ-ಲಾಕ್​ಡೌನ್​ ಕಾರಣದಿಂದಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದು, ಬಸ್​ ನಿಲ್ದಾಣಗಳು ಕೂಡ ಭಣಗುಡುತ್ತಿವೆ. ಮಣ್ಣೂರು ಗ್ರಾಮದ ಈ ಬಸ್​ ನಿಲ್ದಾಣವೂ ಅದಕ್ಕೆ ಹೊರತಾಗಿಲ್ಲ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ರಸ್ತೆ ಬಿಕೋ ಎನ್ನುತ್ತಿದ್ದು, ಬಸ್ ನಿಲ್ದಾಣವೂ ಖಾಲಿ ಇದೆ. ಹೀಗಾಗಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಒಂದು ಲೋಡ್​ನಷ್ಟು ಶೇಂಗಾ ಹೊಟ್ಟನ್ನು ರೈತರೊಬ್ಬರು ಇಲ್ಲಿ ಶೇಖರಿಸಿ ಇಟ್ಟಿದ್ದಾರೆ. ಇದು ಬಸ್​ ನಿಲ್ದಾಣದ ಸದ್ಬಳಕೆಯೋ-ದುರ್ಬಳಕೆಯೋ ಎಂಬ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಹಲವರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಸ್​ ಬರದಿದ್ದರೂ, ಪ್ರಯಾಣಿಕರು ಇರದಿದ್ದರೂ ಈ ಬಸ್​ ನಿಲ್ದಾಣ ಗಮನ ಸೆಳೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net