ಕಚೇರಿಯಲ್ಲೇ ಕಾಮದಾಟ, ಡಾ.ರತ್ನಾಕರ್ ಬಂಧನ; ಮಹಿಳೆಯರನ್ನು ಕರೆದುಕೊಂಡು ರಾಜ್ಯದ ಹಲವೆಡೆಗಷ್ಟೇ ಅಲ್ಲ, ಹೊರಜಿಲ್ಲೆಗೂ ಹೋಗಿದ್ದ..

1195135
Published on

ಮಂಗಳೂರು: ಮಹಿಳೆಯರೊಂದಿಗೆ ಆಸ್ಪತ್ರೆಯಲ್ಲಿ ಕಾಮದಾಟವಾಡಿ ವಿಡಿಯೋ ಸಮೇತ ಸಿಕ್ಕಿಬಿದ್ದಿರುವ ಸರ್ಕಾರಿ ವೈದ್ಯ, ಮಂಗಳೂರಿನ ಆಯುಷ್ಮಾನ್ ನೋಡೆಲ್ ಆಫೀಸರ್ ಹಾಗೂ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್​ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆತನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ರತ್ನಾಕರ್​ನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿರುವ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್​. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಆತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆ ಸಂದರ್ಭ ರತ್ನಾಕರ್​ನಿಂದ ಹಲವಾರು ಮಾಹಿತಿ ಪಡೆದುಕೊಂಡ ಪೊಲೀಸರು ಮೂವರು ಸಂತ್ರಸ್ತೆಯರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.

ರತ್ನಾಕರ್ ಈ ಹಿಂದೆ ಮಹಿಳೆಯರನ್ನು ಕರೆದುಕೊಂಡು ಮುರುಡೇಶ್ವರಿ, ಕುಂದಾಪುರ, ಮಡಿಕೇರಿ, ಪಿರಿಯಾಪಟ್ಟಣ ಮಾತ್ರವಲ್ಲದೆ ಹೊರ ಜಿಲ್ಲೆಗಳಿಗೂ ತೆರಳಿದ್ದು ಅಲ್ಲಿಯೂ ಲೈಂಗಿಕ ದೌರ್ಜನ್ಯವೆಸಗಿ ಕಿರುಕುಳ ನೀಡಿದ್ದು ತಿಳಿದುಬಂದಿದೆ. ಪೊಲೀಸರಿಂದ ರತ್ನಾಕರ್ ವಿಚಾರಣೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net