

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನ ಹೆಚ್ಚಳದ ಜತೆಗೆ ಕರೊನಾ ರೂಪಾಂತರಿ ಒಮಿಕ್ರೋನ್ ಭೀತಿಯೂ ಉಂಟಾಗಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಕೋವಿಡ್-19 ನಿಯಂತ್ರಣ ಸಂಬಂಧ ವಿಶೇಷ ಸಭೆ ನಡೆಸಲಾಗಿದೆ. ಕರೊನಾ ಪ್ರಕರಣಗಳ ನಿಯಂತ್ರಣ ಹಾಗೂ ಸೋಂಕು ತಡೆ ಸಲುವಾಗಿ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಪ್ರಮುಖ ನಿರ್ಧಾರಗಳ ವಿವರ ಇಂತಿದೆ.