ಹಾವೇರಿ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳ ಆತ್ಮಹತ್ಯೆ; ತಮ್ಮ ಸತ್ತ ಸ್ಥಳದಲ್ಲೇ ನೇಣು ಹಾಕಿಕೊಂಡ ಅಕ್ಕ..

Nagaraj Bhagya
Published on

ಬ್ಯಾಡಗಿ: ಹಾವೇರಿಯ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳು ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ನಾಗರಾಜ್ (16) ಮತ್ತು ಭಾಗ್ಯ (18) ಆತ್ಮಹತ್ಯೆ ಮಾಡಿಕೊಂಡಿರುವ ಸೋದರ, ಸೋದರಿ. ಇವರಿಬ್ಬರೂ ಶಾಸಕ ನೆಹರೂ ಓಲೇಕಾರ್ ಅವರ ಸಂಬಂಧಿಕರಾದ ರೇಣುಕಮ್ಮ ಮತ್ತು ಚಂದ್ರಪ್ಪ ದಂಪತಿಯ ಮಕ್ಕಳು. ಆತ್ಮಹತ್ಯೆ ಮಾಡಿಕೊಂಡವರಿಬ್ಬರೂ ಸಂಬಂಧದಲ್ಲಿ ಓಲೇಕಾರ್ ಅವರಿಗೆ ಅಕ್ಕನ ಮಗನ ಮಕ್ಕಳಾಗಬೇಕು.

ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ನಾಗರಾಜ್ ಬ್ಯಾಡಗಿಯಲ್ಲಿರುವ ತಮ್ಮ ಮನೆಯಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ದಿಢೀರ್​ ಸಾವಿನ ಸುದ್ದಿಯನ್ನು ಕೇಳಿ ಮತ್ತು ಕುಟುಂಬಸ್ಥರ ಆಕ್ರಂದನ ನೋಡಿ ನೊಂದ ಭಾಗ್ಯ ಕೂಡ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ತಾನೂ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗರಾಜ್ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ವಿಷಯ ಇನ್ನೂ ಬಹಿರಂಗವಾಗಿಲ್ಲ. ಬ್ಯಾಡಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net