ಸಿಂಗಲ್​, ಡಬಲ್, ಟ್ರಿಪಲ್ ಸ್ಟಾರ್​ಗಳಿಂದಲೂ ಪವರ್​ ಸ್ಟಾರ್ ಸ್ಮರಣೆ; ಅಪ್ಪು ಸ್ಮರಣಾರ್ಥ ಪೊಲೀಸರಿಂದ ಸೈಕಲ್ ಜಾಥಾ

Puneeth
Published on

ಬೆಂಗಳೂರು: ಪವರ್​ ಸ್ಟಾರ್ ಪುನೀತ್ ರಾಜಕುಮಾರ್​ ಅವರನ್ನು ಹಲವರು ಹಲವಾರು ರೀತಿಯಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಿರುವುದಷ್ಟೇ ಅಲ್ಲದೆ, ಅಪ್ಪು ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಬಾನ ದಾರಿಯಲ್ಲಿ ಜಾರಿ ಹೋದರೂ ಜನರ ಮನಸಲ್ಲಿ ಧ್ರುವತಾರೆಯಾಗಿ ಕಂಗೊಳಿಸುತ್ತಿದ್ದಾರೆ. ಚಂದನವನದ ಈ ತಾರೆಗೆ ಇದೀಗ ಮತ್ತೊಂದಷ್ಟು ನಕ್ಷತ್ರಗಳು ತಮ್ಮ ನಮನ ಸಲ್ಲಿಸಲು ಮುಂದಾಗಿವೆ.

ಅಂದರೆ ಪವರ್​ ಸ್ಟಾರ್​ಗೆ ಸಿಂಗಲ್, ಡಬಲ್, ಟ್ರಿಪಲ್​ ಸ್ಟಾರ್​ಗಳೂ ನಮನ ಸಲ್ಲಿಸಲಿದ್ದಾರೆ. ಅರ್ಥಾತ್, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪುನೀತ್ ಸ್ಮರಣಾರ್ಥ ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಬೆಂಗಳೂರು ಸಂಚಾರ ಪೊಲೀಸ್ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನ. 21ರ ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸರು ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವದ ಜತೆಗೇ ಈ ಸೈಕಲ್ ಜಾಥಾ ನಡೆಯಲಿದ್ದು, ಚಿತ್ರನಟ ಡಾ.ಶಿವರಾಜಕುಮಾರ್ ಅವರು ಸೈಕಲ್ ಜಾಥಾಗೆ ಚಾಲನೆ ನೀಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್​​ನ ಅಪರ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net