

ಬೆಂಗಳೂರು: ಯಲಹಂಕದ ಮೇಲ್ಸೇತುವೆಗೆ ಸ್ವಾತಂತ್ರೃವೀರ ಸಾವರ್ಕರ್ ಹೆಸರಿಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷಗಳ ನಾಯಕರಿಗೆ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
‘‘ಕಾಲೇಜುಗಳು, ಬಡಾವಣೆಗಳು, ಆಸ್ಪತ್ರೆಗಳು ಮತ್ತು ಕ್ಯಾಂಟೀನ್‌ಗಳಿಗೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಹೆಸರಿಡುವಾಗ ಮಣ್ಣಿನ ಮಕ್ಕಳು ನೆನಪಾಗಲಿಲ್ಲವೇ ಸಿದ್ಧರಾಮಯ್ಯನವರೇ’’ ಎಂದು ಸಿ.ಟಿ. ರವಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
‘‘ಅಪ್ಪಟ ದೇಶಭಕ್ತರಾಗಿದ್ದ ವೀರ ಸಾವರ್ಕರ್ ಅವರ ಹೆಸರನ್ನು ಒಂದು ಮೇಲ್ಸೇತುವೆಗೆ ಇಡುವುದನ್ನು ಸಹಿಸಲು ನಿಮ್ಮಿಂದಾಗುತ್ತಿಲ್ಲ ಅಲ್ಲವೆ’’ ಎಂದೂ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರು ಇದಕ್ಕೆ ಮುನ್ನ ನೀಡಿದ ಹೇಳಿಕೆಯಲ್ಲಿ, ‘‘ಸಾವರ್ಕರ್ ಹೆಸರಿನ ಬದಲು ನಮ್ಮ ನಾಡಿನ, ಈ ಮಣ್ಣಿನ ಹೋರಾಟಗಾರರು ಹೆಸರನ್ನು ಇಡುವುದು ಸೂಕ್ತ’’ ಎಂದು ಅಭಿಪ್ರಾಯಪಟ್ಟಿದ್ದರು.