More

    ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದಾಗಲ್ಲ…. ಗೊಂದಲ ಮಾಡ್ಕೊಬೇಡಿ, ಚೆನ್ನಾಗಿ ಓದ್ಕೊಳಿ..

    ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷೆ ಯಾವುದೇ ಕಾರಣಕ್ಕೂ ರದ್ದಾಗಲ್ಲ, ಈ ಬಗ್ಗೆ ಚಿಂತೆ ಮಾಡದೇ ಚೆನ್ನಾಗಿ ಓದ್ಕೊಳಿ…..
    ಇದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ಕುಮಾರ್​ ವಿದ್ಯಾರ್ಥಿಗಳಿಲ್ಲಿ ಮಾಡಿರುವ ಮನವಿ.

    ರಾಜ್ಯದಲ್ಲಿ ಜೂ.25ರಿಂದ ಜುಲೈ ನಾಲ್ಕರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಿಗದಿಯಾಗಿದ್ದು, ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಸಂದರ್ಭದಲ್ಲಿ ಕೆಲ ಸಂಘಟನೆಗಳು ಹಾಗೂ ಚಿಂತಕರು ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಿವೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ ಸುರೇಶ್​ಕುಮಾರ್​ ಈ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ; ಗುಡ್​ ಟಚ್​.. ಬ್ಯಾಡ್​ ಟಚ್​ ಮುಗೀತು…, ಶಾಲೆಗಳಲ್ಲಿನ್ನು ‘ನೋ ಟಚ್​’ ಮಂತ್ರ 

    ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಮಕ್ಕಳಿಗೂ ಹಬ್ಬುತ್ತದೆ ಎಂಬ ಆತಂಕ ವ್ಯಕ್ತಪಡಿಸಲಾಗಿದೆ. ಆದರೆ, ಕೇರಳದಲ್ಲಿ ಇಂಥ ಭಯದ ನಡುವೆಯೇ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಗುತ್ತದೆ ಎಂದು ಸುರೇಶ್​ಕುಮಾರ್​ ಭರವಸೆ ನೀಡಿದ್ದಾರೆ.

    ಎಸ್​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನ ಜೂ.18ರಂದು ಬಾಕಿ ಉಳೀದಿರುವ ಪಿಯುಸಿಯ ಇಂಗ್ಲಿಷ್​ ಪರೀಕ್ಷೆ ಕೂಡ ನಿಗದಿಯಂತೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

    https://www.vijayavani.net/corona-effect-hundreds-of-pre-schools-for-sale-in-bangalore/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts