ಕುರಿಗಾಹಿಯನ್ನು ಎಳೆದೊಯ್ದ ಮೊಸಳೆ!

Crocodile, Sheep, KrishnaRiver
Published on

ಯಾದಗಿರಿ: ಕುರಿಗೆ ಸ್ನಾನ ಮಾಡಿಸಲೆಂದು ನದಿ ನೀರಿಗಿಳಿದ ಕುರಿಗಾಹಿಯನ್ನ ಮೊಸಳೆ ಎಳೆದುಕೊಂಡು ಹೋದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದ ಲಕ್ಷ್ಮಣ್ಣನನ್ನ ಮೊಸಳೆ ಎಳೆದೊಯ್ದಿದೆ. ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದ ಕೃಷ್ಣಾ ನದಿಯ ನೀರಲ್ಲಿ ಕುರಿಗಳಿಗೆ ಸ್ನಾನ ಮಾಡಿಸಲೆಂದು ಹೋದಾಗ ಈ ಘಟನೆ ಸಂಭವಿಸಿದೆ.

ಬಿಸಿಲು ಹೆಚ್ಚಿರುವ ಕಾರಣ ನಾಲ್ಕು ಜನ ಕುರಿಗಾಹಿಗಳು ಕುರಿಗಳಿಗೆ ಸ್ನಾನ ಮಾಡಿಸಲು ಕೃಷ್ಣಾ ನದಿಗೆ ತೆರಳಿದ್ದರು. ಕುರಿಗಳ ಮೈ ತೊಳೆಯುತ್ತಿದ್ದರು. ಈ ವೇಳೆ ದಾಳಿ ಮಾಡಿದ ಮೊಸಳೆ, ಲಕ್ಷ್ಮಣ್ಣನನ್ನು ಎಳೆದುಕೊಂಡು ನೀರೊಳಗೆ ಮರೆಯಾಗಿದೆ. ಉಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net