ಶ್ರೀಮೈಲಾರ ಜಾತ್ರೆ ರದ್ದು: ಕಾರ್ಣಿಕ ಭವಿಷ್ಯ ಹೇಳೋಕೂ ಅಡ್ಡಿ! ಕಾರಣ ಇಲ್ಲಿದೆ

Sri mailara jatre-karnika
Published on

ಹೊಸಪೇಟೆ(ಬಳ್ಳಾರಿ): ಐತಿಹಾಸಿಕ ಶ್ರೀಮೈಲಾರ ಜಾತ್ರೆ ಈ ಬಾರಿ ನಡೆಯಲ್ಲ. ಫೆ.19ರಿಂದ ಮಾ.2ರವರೆಗೂ ನಡೆಯಬೇಕಿದ್ದ ಜಾತ್ರೋತ್ಸವವನ್ನು ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಹಡಗಲಿ ತಾಲೂಕಿನ ಧಾರ್ಮಿಕ ಕ್ಷೇತ್ರ ಮೈಲಾರ ಗ್ರಾಮದ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಯಲ್ಲಿ ನಡೆಯುವ ಕಾರ್ಣಿಕೋತ್ಸವದಲ್ಲಿ ಪಾಲ್ಗೊಳ್ಳಲು ಪ್ರತಿವರ್ಷ ರಾಜ್ಯದ ಮೂಲೆ, ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಸುಮಾರು 15 ಅಡಿ ಮರದ ಬಿಲ್ಲನ್ನು ಏರಿ ಕಾರ್ಣಿಕ ನುಡಿಯುವ ಗೊರವಯ್ಯ 'ಸದ್ದಲೇ...' ಎಂದು ಕೂಗಿದಾಗ ನೆರೆದ ಲಕ್ಷಾಂತರ ಜನ ನಿಶ್ಶಬ್ದವಾಗಿ ನಿಂತು ಕಾರ್ಣಿಕ ಭವಿಷ್ಯವನ್ನು ಆಲಿಸುತ್ತಿದ್ದರು. ಇದನ್ನೂ ಓದಿರಿ ಹಣ ಕೊಡದಿದ್ದರೆ ವಿಡಿಯೋ ವೈರಲ್, ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್!

ಈ ಬಾರಿ ಶ್ರೀ ಮೈಲಾರ ಜಾತ್ರೆಗೂ ಕರೊನಾ ಛಾಯೆ ಆವರಿಸಿರುವ ಕಾರಣ ಜಾತ್ರೆ ರದ್ದುಗೊಳಿಸಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ. ಫೆ.19ರಿಂದ ಮಾರ್ಚ್ 2ರ ವರೆಗೆ ನಡೆಯಬೇಕಿದ್ದ ಜಾತ್ರಾ ಮಹೋತ್ಸವದಲ್ಲಿ ಮಾ.1ರಂದು ಕಾರ್ಣಿಕೋತ್ಸವ ನಡೆಯಬೇಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net