ಸೇನೆಯಿಂದ ಸ್ವಗ್ರಾಮಕ್ಕೆ ಬಂದ ಕೋಲಾರದ ಯೋಧ ಪತ್ನಿಯ ಮಡಿಲಲ್ಲೇ ಪ್ರಾಣಬಿಟ್ಟರು!

retired soldier manjunath
Published on

ಕೋಲಾರ: ವೀರಯೋಧನಾಗಿ 17 ವರ್ಷ ಭಾರತಾಂಬೆ ಸೇವೆ ಮಾಡಿ ಸಾಕಷ್ಟು ಕನಸುಗಳನ್ನ ಹೊತ್ತು ಸ್ವಗ್ರಾಮಕ್ಕೆ ಮರಳಿದ್ದ ನಿವೃತ್ತ ಯೋಧ ತನ್ನ ಮಡದಿಯ ಮಡಿಲಲ್ಲಿ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಕೋಲಾರದಲ್ಲಿ ನಡೆದಿದ್ದು, ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.

38 ವರ್ಷದ ಮಂಜುನಾಥ ಅವರು ಜ.31ರಂದು ಸೇನೆಯಿಂದ ನಿವೃತ್ತಿ ಪಡೆದು ಕೋಲಾರಕ್ಕೆ ಆಗಮಿಸಿದ್ದರು. 17 ವರ್ಷ ವರ್ಷ ಕುಟುಂಬದಿಂದ ದೂರವಿದ್ದ ಅವರು, ತಂದೆ-ತಾಯಿ, ಪತ್ನಿ ಹಾಗೂ ಮಕ್ಕಳೊಂದಿಗೆ ಜೀವನ ನಡೆಸಲು ನೂರಾರು ಕನಸುಗಳನ್ನ ಹೊತ್ತು ಬಂದಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತು. ಇದನ್ನೂ ಓದಿರಿ ಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?

ನಿವೃತ್ತಿ ಬಳಿಕ ಅಂದರೆ ಫೆ.1ರಂದು ಸ್ವಗ್ರಾಮಕ್ಕೆ ಬಂದಿದ್ದ ಮಂಜುನಾಥಗೆ ಮರುದಿನವೇ ಹೃದಯಾಘಾತವಾಗಿದ್ದು, ಪತ್ನಿಯ ಮಡಿಲಲ್ಲೇ ಕೊನೆಯುಸಿರೆಳೆದರು. ಸ್ವಗ್ರಾಮ ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದಲ್ಲಿ ಬುಧವಾರ ಅಂತ್ಯಸಂಸ್ಕಾರ ನೆರವೇರಿತು.

ಮೃತರಿಗೆ ತಂದೆ ನಾರಾಯಣಸ್ವಾಮಿ, ತಾಯಿ ರತ್ನಮ್ಮ, ಪತ್ನಿ ಅಶ್ವಿನಿ, ಇಬ್ಬರು ಮಕ್ಕಳಿದ್ದಾರೆ. ಕುಟುಂಬಸ್ಥರು ಮತ್ತು ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು. ನಿವೃತ್ತ ಯೋಧರು, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ತಹಸೀಲ್ದಾರ್ ದಯಾನಂದ ಅವರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ನನ್ನ ಗಂಡನ ಬರುವಿಕೆಗಾಗಿ ಕಾಯುತ್ತಿದೆ. ಮಕ್ಕಳು ಕೂಡ ಅಪ್ಪನಿಗಾಗಿ ದಿನಗಳನ್ನ ಎಣಿಸುತ್ತಿದ್ದರು. ಅಂತಿಮವಾಗಿ ನಮ್ಮೊಟ್ಟಿಗೆ ಇರಲು ಬಂದ ಅವರು ನನ್ನ ಮಡಿಲಲ್ಲೇ ಪ್ರಾಣ ಬಿಟ್ಟರು ಎನ್ನುತ್ತಾ ಪತ್ನಿ ಅಶ್ವಿನಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net