More

    ಸಾಕು ನಾಯಿಗೆ ಸೀಮಂತ! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ ದೃಶ್ಯ

    ಸಂಶಿ: ಪ್ರಾಣಿಗಳನ್ನು ಹೀನಾಯವಾಗಿ ಕಂಡು ಅನಗತ್ಯವಾಗಿ ಹಿಂಸಿಸುವ ಅದೆಷ್ಟೋ ಜನರ ಮಧ್ಯ ಸಾಕು ನಾಯಿಗೆ ಸೀಮಂತ ಮಾಡುವ ಧಾರವಾಡ ಜಿಲ್ಲೆಯಲ್ಲೊಬ್ಬರು ಮಾದರಿಯಾಗಿದ್ದಾರೆ.

    ಜಾತಿ ನಾಯಿಗಳನ್ನು ಸಾಕುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಶ್ವಾನಕ್ಕೆ ಬೇಕಾದ ವಿಶೇಷ ಆಹಾರ ನೀಡಿ ಅದನ್ನು ಮನೆಯ ಸದಸ್ಯನಂತೆ ಕಾಣುವವರಿದ್ದಾರೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ನಾಡರ ಬಯಲು ಓಣಿಯ ನಿವಾಸಿ ಸಾರಿಗೆ ನೌಕರ ರಮೇಶ ಪಡತೇರ ಎಂಬುವವರ ಮನೆಯಲ್ಲಿ ಸಾಕು ನಾಯಿ ಲೂಸಿಗೆ ಸೋಮವಾರ ರಾತ್ರಿ ಸೀಮಂತ ಮಾಡಿದ್ದು ಮತ್ತಷ್ಟು ವಿಶೇಷ. ಇದನ್ನೂ ಓದಿರಿ ಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?

    ಸಾಕು ನಾಯಿಗೆ ಸೀಮಂತ! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ ದೃಶ್ಯಗರ್ಭಿಣಿ ಸ್ತ್ರೀಯರಿಗೆ ಸಂಪ್ರದಾಯದಂತೆ ಹೇಗೆಲ್ಲ ಸೀಮಂತ ಕಾರ್ಯ ಮಾಡುತ್ತಾರೋ ಅದೇ ರೀತಿಯಲ್ಲಿ ಸಾಕು ಸಾಯಿ ಲೂಸಿಗೆ ಕುಟುಂಬಸ್ಥರೆಲ್ಲ ಸೇರಿ ಸಂಭ್ರಮದಿಂದ ಸೀಮಂತ ಮಾಡಿದ್ದಾರೆ. ಲೂಸಿಗೆ ಸೀರೆ ಉಡಿಸಿ, ಹೂಮಾಲೆ ಹಾಕಿ ಅಲಂಕರಿಸಿದ್ದರು. ಲೂಸಿಯನ್ನು ಸುಮಂಗಲೆಯರು ಆರತಿ ಬೆಳಗಿದ್ದು ವಿಶೇಷ. ಬಗೆಬಗೆಯ ತಿನಿಸು, ಹಣ್ಣುಗಳನ್ನು ಇರಿಸಿ, ಅರಿಶಿನ-ಕುಂಕುಮ, ಹಸಿರು ಬಳೆ, ತಾಂಬೂಲ ಇಟ್ಟು ಉಡಿ ತುಂಬಿದ್ದಾರೆ. ಮನೆ ಮಂದಿಯಷ್ಟೇ ಅಲ್ಲದೆ ನೆರೆಹೊರೆಯವರೂ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ದೃಶ್ಯ ಎಲ್ಲೆಡೆ ವೈರಲ್​​ ಆಗುತ್ತಿದ್ದು, ಇದು ಸಾಕು ನಾಯಿ ಮೇಲಿನ ಪ್ರೀತಿಯ ಪ್ರತೀಕ ಎಂದು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಹಣ ಕೊಡದಿದ್ದರೆ ವಿಡಿಯೋ ವೈರಲ್, ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್!

    ಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?

    ಮಂಡ್ಯದಲ್ಲೊಂದು ಅಚ್ಚರಿ: 5 ವರ್ಷ ಕಗ್ಗಂಟಾಗಿದ್ದ ಸಮಸ್ಯೆಗೆ ತಾಸಿನಲ್ಲೇ ಪರಿಹಾರ ನೀಡಿದ ಬಸವಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts