ಮನೆ ಗೋಡೆ ಕುಸಿತ; ಮಲಗಿದ್ದಲ್ಲೇ ಹೆಣವಾದ ಗಂಡ-ಹೆಂಡತಿ: ಇನ್ನೊಬ್ಬರಿಗೆ ಗಾಯ..

House
ದುರಂತ ಸಂಭವಿಸಿ ಸ್ಥಳದಲ್ಲಿ ಪೊಲೀಸರು ಮತ್ತು ಸ್ಥಳೀಯರು
Published on

ಕೋಲಾರ: ಮಳೆಗೆ ಮರ-ಮನೆ ಬಿದ್ದು ಸಾವು-ನೋವು ಸಂಭವಿಸುವ ಪ್ರಕರಣಗಳು ಮುಂದುವರಿದಿದ್ದು, ಇಲ್ಲೊಂದು ಕಡೆ ಮನೆಯ ಗೋಡೆ ಕುಸಿದು ಗಂಡ-ಹೆಂಡತಿ ಇಬ್ಬರೂ ಮಲಗಿದ್ದಲ್ಲೇ ಹೆಣವಾಗಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ ಇನ್ನೊಬ್ಬರು ಗಾಯಗೊಂಡಿದ್ದಾರೆ.

ಕೋಲಾರ ಜಿಲ್ಲೆಯ ಕೆ.ಮಲ್ಲಂಡಹಳ್ಳಿ ಎಂಬ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ನಾಗರಾಜಪ್ಪ (65) ಮತ್ತು ಲಕ್ಷ್ಮಮ್ಮ (60) ಸಾವಿಗೀಡಾದ ಗಂಡ-ಹೆಂಡತಿ. ಮನೆಯಲ್ಲಿದ್ದ ಸೀನಪ್ಪ ಎಂಬ ಇನ್ನೊಬ್ಬರು ಗಾಯಗೊಂಡಿದ್ದಾರೆ.

ಗ್ರಾಮಸ್ಥರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಸೀನಪ್ಪ ಅವರನ್ನು ದುರಂತ ಸ್ಥಳದಿಂದ ಪಾರು ಮಾಡಿದ್ದಾರೆ. ವೇಮಗಲ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net