ಸಚಿವರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿಯ ಹೈಡ್ರಾಮಾ!; ಕಾರ್ಯಕರ್ತರ ನೂಕಾಟ-ತಳ್ಳಾಟ

ಸಚಿವರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿಯ ಹೈಡ್ರಾಮಾ! - youtube
Published on

ಕೊಡಗು: ಕಂದಾಯ ಸಚಿವರ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್​ ನಾಯಕಿಯೊಬ್ಬರು ಹೈಡ್ರಾಮಾ ನಡೆಸಿದ್ದು, ಉಭಯಪಕ್ಷಗಳ ಕಾರ್ಯಕರ್ತರ ನೂಕಾಟ-ತಳ್ಳಾಟಕ್ಕೂ ಕಾರಣವಾಯಿತು. ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶ ಮಾಡಬೇಕಾಯಿತು.

ಕುಶಾಲನಗರ ತಾಲೂಕು ಉದ್ಘಾಟನೆ ಸಲುವಾಗಿ ಸಚಿವ ಆರ್. ಅಶೋಕ್ ಅವರು ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪರಿಣಾಮವಾಗಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕಾಟ- ತಳ್ಳಾಟ ನಡೆದಿದೆ. ಸಚಿವ ಆರ್. ಅಶೋಕ್ ಎದುರೇ ಈ ಹೈಡ್ರಾಮಾ ನಡೆದಿದೆ.

ತಾಲೂಕು ಹೋರಾಟ ಸಮಿತಿಯವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದು ಕಾಂಗ್ರೆಸ್ ನಾಯಕಿ ಕೆ.ಪಿ. ಚಂದ್ರಕಲಾ ಗದ್ದಲ ಎಬ್ಬಿಸಿದರು. ಅವರನ್ನು ಪೊಲೀಸರು ನಿಯಂತ್ರಿಸಿ, ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net