More

    ಭಾರತೀಯ ಯೋಧರಿಂದಲೇ ಪಾಕ್​ಗೆ ಮಾಹಿತಿ!; ಸಿಕ್ಕಿಬಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು..

    ನವದೆಹಲಿ: ಭಾರತೀಯ ಯೋಧರಿಬ್ಬರು ಪಾಕಿಸ್ತಾನಕ್ಕೆ ಮಹತ್ವದ ಮಾಹಿತಿ ಕೊಡುತ್ತಿದ್ದುದು ಪತ್ತೆಯಾಗಿದ್ದು, ಅಂಥ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹರ್​ಪ್ರೀತ್ ಸಿಂಗ್​ (23), ಗುರ್ಬೇಜ್​ ಸಿಂಗ್ (23) ಬಂಧಿತ ಯೋಧರು. ಇವರಿಬ್ಬರನ್ನು ಪಂಜಾಬ್​ ಪೊಲೀಸರು ವಶಕ್ಕೆ ಪಡೆದಿಕೊಂಡಿರುವುದಾಗಿ ಅಲ್ಲಿನ ಡಿಜಿಪಿ ತಿಳಿಸಿದ್ದಾರೆ.

    ಅಮೃತಸರದ ಚೀಚ ಮೂಲದ ಹರ್​ಪ್ರೀತ್ ಸಿಂಗ್ 2017ರಲ್ಲಿ ಸೇನೆಗೆ ಸೇರಿದ್ದು, 19 ರಾಷ್ಟ್ರೀಯ ರೈಫಲ್ಸ್​ನಲ್ಲಿದ್ದು, ಅನಂತ್​ನಾಗ್​ನಲ್ಲಿ ಕರ್ತವ್ಯದಲ್ಲಿದ್ದ. 18 ಸಿಖ್​ ಲೈಟ್​ ಇನ್​ಫ್ಯಾಂಟ್ರಿನಲ್ಲಿರುವ ಗುರ್ಬೇಜ್​ ಸಿಂಗ್ ಕಾರ್ಗಿಲ್​ನಲ್ಲಿ ಕ್ಲರ್ಕ್​ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈತ 2015ರಲ್ಲಿ ಸೇನೆಯನ್ನು ಸೇರಿದ್ದ.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಎಸ್​ಎಸ್​​ಪಿ ನವೀನ್ ಸಿಂಗ್ಲಾ ನೇತೃತ್ವದ ಜಲಂಧರ್​ ಗ್ರಾಮೀಣ ಪೊಲೀಸರು ಎನ್​ಡಿಪಿಎಸ್​ ಕೇಸ್​ ತನಿಖೆ ನಡೆಸುತ್ತಿದ್ದಾಗ ಸ್ಮಗ್ಲರ್ ರಣವೀರ್ ಸಿಂಗ್​ನಿಂದ ಸಿಕ್ಕ ಮಾಹಿತಿ ಇವರಿಬ್ಬರ ಅಸಲಿಯತ್ತನ್ನು ಬಯಲುಪಡಿಸಿದೆ. ಭಾರತೀಯ ಸೇನೆಯ ರಹಸ್ಯ ಮಾಹಿತಿ ಹಾಗೂ ಭಾರತದ ಗಡಿಯಲ್ಲಿ ಯೋಧರ ನಿಯೋಜನೆ ಮತ್ತು ಕಾರ್ಯನಿರ್ವಹಣೆಯ ಮಹತ್ವದ ಮಾಹಿತಿ ಇರುವ ದಾಖಲೆಗಳು ಇವನ ಬಳಿ ಸಿಕ್ಕಿದ್ದವು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಈತನದೇ ಊರಿನ ಗೆಳೆಯನಾಗಿರುವ ಹರ್​ಪ್ರೀತ್​ ಸಿಂಗ್​ನಿಂದ ಸಿಕ್ಕಿರುವುದಾಗಿ ತಿಳಿಸಿದ್ದಾನೆ. ಹೆರಾಯ್ನ್​ ಕಳ್ಳಸಾಗಣಿಕೆ ಕೇಸ್​ನಲ್ಲಿ ಮೇ 21ರಂದು ರಣ್​ವೀರ್​ ಸಿಂಗ್​ನನ್ನು ಬಂಧಿಸಲಾಗಿತ್ತು ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತ ತಿಳಿಸಿದ್ದಾರೆ.

    ಇದನ್ನೂ ಓದಿ: ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?

    ರಣ್​ವೀರ್​ ನೀಡುತ್ತಿದ್ದ ಆರ್ಥಿಕ ಆಮಿಷಕ್ಕೆ ಒಳಗಾಗಿ ಹರ್​ಪ್ರೀತ್ ಸಿಂಗ್ ಈ ರೀತಿ ಮಾಡುತ್ತಿದ್ದ ಮತ್ತು ಅದಕ್ಕಾಗಿ ಗುರ್ಬೇಜ್​ ಸಿಂಗ್​ನ ನೆರವು ಪಡೆಯುತ್ತಿದ್ದ. ಗುರ್ಬೇಜ್​ ಸಿಂಗ್ ಕಾರ್ಗಿಲ್​ನ 121 ಇನ್​ಫ್ಯಾಂಟ್ರಿ ಬ್ರಿಗೇಡ್​ ಹೆಡ್​ಕ್ವಾರ್ಟರ್ಸ್​ನಲ್ಲಿ ಕ್ಲರ್ಕ್ ಆಗಿದ್ದಿದ್ದರಿಂದ ಆತನಿಗೆ ಸೇನೆಯ ಮಹತ್ವದ ದಾಖಲೆಗಳು ಸಿಗುತ್ತಿದ್ದವು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಇದುವರೆಗೆ ಇವರು ಇಂಥ 900 ದಾಖಲೆಗಳನ್ನು ಹಂಚಿಕೊಂಡಿರುವ ಮಾಹಿತಿ ಲಭಿಸಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ರಣ್​ವೀರ್ ಸಿಂಗ್ ಈ ಮಾಹಿತಿಗಳನ್ನು ನೇರವಾಗಿ ಪಾಕಿಸ್ತಾನಿ ಐಎಸ್​ಐನವರಿಗೆ ತಲುಪಿಸುತ್ತಿದ್ದ. ಇಲ್ಲವೆ ಇನ್ನೊಬ್ಬ ಪ್ರಮುಖ ಸ್ಮಗ್ಲರ್ ಗೋಪಿ ಮೂಲಕ ಪಾಕ್​ ಡ್ರಗ್​ ಸ್ಮಗ್ಲರ್ ಮೂಲಕ ಐಎಸ್​ಐನವರಿಗೆ ತಲುಪಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಹರ್​ಪ್ರೀತ್ ಹಾಗೂ ಗುರ್ಬೇಜ್ ಇಬ್ಬರಿಗೂ ಹಣ ಸಿಗುತ್ತಿತ್ತು ಎಂದು ಗುಪ್ತ ಹೇಳಿದ್ದಾರೆ. (ಏಜೆನ್ಸೀಸ್)

    18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

    ಸಗಣಿಯಿಂದಲೇ ಪೇಂಟ್​; ದೇಶದ ಮೊದಲ ಸ್ವಯಂಚಾಲಿತ ಘಟಕ ಇಂದು ಲೋಕಾರ್ಪಣೆ

    ‘ಕಪಿಲ್​ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts