

ಆನೇಕಲ್: ವಾಕಿಂಗ್ಗೆ ಎಂದು ಹೇಳಿ ಹೋಗಿದ್ದ ವ್ಯಕ್ತಿಯೊಬ್ಬರು ವಾಪಸ್ ಬರಲೇ ಇಲ್ಲ. ದುರಂತವೆಂದರೆ, ವಾಕಿಂಗ್ ವೇಳೆ ಕಾಂಪೌಂಡ್ ಗೋಡೆ ಕುಸಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಈ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮಂಜುನಾಥ ಎಂಬವರು ಮೃತಪಟ್ಟಿದ್ದಾರೆ. ಸರ್ಜಾಪುರ ಕೆರೆಯ ಪಕ್ಕದಲ್ಲಿನ ಗೋಡೆ ಇವರ ಮೇಲೆ ಬಿದ್ದಿದೆ. ಬಡಾವಣೆ ಸುರಕ್ಷತೆಗಾಗಿ ಹಾಕಿದ್ದ ಈ ಗೋಡೆ ತಲೆಯ ಮೇಲೇ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಡಾವಣೆಯ ಸುರಕ್ಷತೆಗೆ ಎಂದು ರೆಡಿಮೇಡ್ ವಾಲ್ ಹಾಕಿದ್ದರು. ಆದರೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದರಿಂದ ಗೋಡೆ ವಾಲಿ ಬಿದ್ದಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.