ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

3knk3
ಕನಕಗಿರಿಯಲ್ಲಿ ನಡೆದ ನದಾಫ್ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನಧಾಫ್ ಪಿಂಜಾರ ಸಂಘದ ರಾಜ್ಯ ಉಪಾಧ್ಯಕ್ಷ ಮೌಲಾಸಾಬ ಬೆಂಡಿಗೇರಿ ಉದ್ಘಾಟಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಮೆಹಬೂಬ ಅಲಿ, ಸಹ ಕಾಯದರ್ಶಿ ಲಾಲ್‌ಸಾಬ ನಧಾಫ್, ಬಾಗಲಕೋಟೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಿಯಾನಭಾನು, ಕೊಪ್ಪಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಲಿಮಾಜಾನ್ ಇತರರಿದ್ದರು.
Published on

ಕನಕಗಿರಿ: ಸಮಾಜದಲ್ಲಿ ಸರ್ವರೂ ಒಂದೇ ಎನ್ನುವ ಭಾವನೆಯನ್ನು ಹೊಂದಿದಾಗ ಮಾತ್ರ ಉತ್ತಮವಾದ ಸಮಾಜ ಕಟ್ಟಲು ಸಾಧ್ಯ ಎಂದು ರಾಜ್ಯ ನಧಾಫ್ ಪಿಂಜಾರ ಸಂಘದ ರಾಜ್ಯ ಉಪಾಧ್ಯಕ್ಷ ಮೌಲಾಸಾಬ ಬೆಂಡಿಗೇರಿ ಹೇಳಿದರು.

ಪಟ್ಟಣದ ಅಂಜುಮನ್ ಶಾದಿಮಹಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ನಧಾಫ್ ಪಿಂಜಾರ ಸಂಘ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಕ್ಕೆ ಸಮುದಾಯದ ಕುಲಶಾಸ್ತ್ರ ಅಧ್ಯಯನ ತೆರೆಯುವಂತೆ ಮನವಿ ಮಾಡಿದ್ದು ಕೆಲವೇ ದಿನಗಳಲ್ಲಿ ಸ್ಪಂದನೆ ದೊರೆಯಲಿದೆ. ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಅಲ್ಲದೇ, ಪಿಂಜಾರ ನಿಗಮಕ್ಕೆ ಅನುದಾನದ ಕೊರತೆ ಇದ್ದು ಹೆಚ್ಚಿನ ಹಣ ನೀಡಿ ಸಮುದಾಯ ಅಭಿವೃದ್ಧಿ ಪಡಿಸುವಂತೆ ಕೈ ಜೋಡಿಸಬೇಕೆಂದು ತಿಳಿಸಿದರು.

ಸಂತ ಶಿಶುನಾಳ ಪ್ರಶಸ್ತಿ ಪುರಸ್ಕೃತ ಹುಸೇನದಾಸ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಪಿಂಜಾರ ರತ್ನ ಎಂದೇ ಖ್ಯಾತಿ ಪಡೆದ ಇಬ್ರಾಹಿಂ ಅವರ ಕೊಡುಗೆ ಅಪಾರವಾದದ್ದು ಎಂದರು. ಪ್ರಾಸ್ತಾವಿಕವಾಗಿ ಡಾ.ಲಾಲ್ ಸಾಬ ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಮೆಹಬೂಬ ಅಲಿ,

ಸಹ ಕಾಯದರ್ಶಿ ಲಾಲ್‌ಸಾಬ ನಧಾಪ್, ಬಾಗಲಕೋಟೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಿಯಾನಭಾನು, ಕೊಪ್ಪಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಲಿಮಾಜಾನ್ ಮಾತನಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಹುಸೇನದಾಸ, ಜಾನಪದ ಕಲೆ ರಾಜ್ಯಮಟ್ಟದ ಯುವಜನ ಮೇಳ ಪ್ರಶಸ್ತಿ ಪುರಸ್ಕೃತ ಅಮೀನ್‌ಸಾಬ ಸೇರಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯ ಮಕ್ಕಳಿಗೆ ಸನ್ಮಾನಿಸಲಾಯಿತು.

ರಾಜ್ಯ ನಧಾಫ್ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಜಲೀಲ್‌ಸಾಬ, ತಾಲೂಕು ಅಧ್ಯಕ್ಷ ಮಾಬುಸಾಬ ಗುರಿಕಾರ, ರಾಜ್ಯ ಕೋಶಾಧಿಕಾರಿ ಶಾಬುದಿನ್‌ಸಾಬ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಖಾಜಾಮೈನುದ್ದೀನ ಗುರಿಕಾರ, ಸೋಪಿಯಾಬೇಗಂ, ಡಾ.ಇಮಾಮಸಾಬ ಕಿನ್ನಾಳ, ಹೊನ್ನುರಸಾಬ ಉಪ್ಪು, ದಾದಾಸಾಬ ವಟಪರ್ವಿ, ರಾಜಮಹ್ಮದ್ ನದಾಫ್, ಅಂಜುಮ್, ನಗರ ಘಟಕ ಅಧ್ಯಕ್ಷ ಹಸೇನಸಾಬ ಗೊರಳ್ಳಿ, ಉಪಾಧ್ಯಕ್ಷ ಶೇಖಹುಸೇನ ಪಾನ್‌ಶಾಪ್, ಜಿಲ್ಲಾ ಸಮಿತಿ ಸದಸ್ಯ ಮೈಬೂಬ ಗುರಿಕಾರ, ತಾಲೂಕು ಉಪಾಧ್ಯಕ್ಷ ಚಂದುಸಾಬ ಗುರಿಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net