

ಹೊಳೆಹೊನ್ನೂರು: ಹಂಚಿನಸಿದ್ದಾಪುರದ ಮುರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ಮುಖ್ಯಶಿಕ್ಷಕ ಎಚ್.ಎಂ.ಗಣೇಶ್ ಮಾತನಾಡಿ, ಶಿಕ್ಷಕರ ಕರ್ತವ್ಯ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಉತ್ತಮ ಲಿತಾಂಶ ಬಂದಿದ್ದು, ಈ ಶಾಲೆ ಮಾದರಿಯಾಗಿದೆ ಎಂದರು. 2024-2025ನೇ ಸಾಲಿನ ಒಂದನೇ ತರಗತಿ ವಿದ್ಯಾರ್ಥಿಗಳ ಪಾಲಕರು ಕಾರ್ಯಕ್ರಮ ಆಯೋಜಿಸಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ಶೇ. 100 ಫಲಿತಾಂಶ ಸಾಧನೆ ಮಾಡಿತ್ತು. ಶಿಕ್ಷಕರಿಗೆ ಸನ್ಮಾನಿಸಲಾಯಿತು. ಸಿದ್ದಪ್ಪ ಗೌಡ, ಎಂ.ಬಿ.ರಂಗಪ್ಪ, ಹನುಮಂತಾಪುರ ನಾಗರಾಜ್, ಪಾಲಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.